ಪುತ್ತೂರು: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ *ಜಿಲ್ಲಾ ಮಟ್ಟದ ಕೋಡ್ ಕ್ರಾಪ್ಟ್ ವಿಜ್ಞಾನ ಮಾದರಿ ಸ್ಪರ್ಧೆಯನ್ನು ರಾಮಕೃಷ್ಣ ಪ್ರೌಢಶಾಲೆಯ ಬಂಟರ ಭವನದಲ್ಲಿ ಆಯೋಜಿಸಲಾಯಿತು.
ನವೋದಯ ಪ್ರೌಢಶಾಲೆಯಲ್ಲಿ ನಡೆದ ಶಾಲಾಮಟ್ಟದ ಕೋಡ್ ಕ್ರಾಪ್ಟ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಆಯ್ಕೆಯಾದ ಮೂರು ತಂಡಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದು, 10ನೇ ತರಗತಿಯ ವಿದ್ಯಾರ್ಥಿಗಳಾದ ತರಣ್ ಪಿ.ಎಂ ಮತ್ತು ಧನ್ವಿತ್ ಇವರು Smart Gas Lekage Detector ಎಂಬ ಮಾದರಿಯನ್ನು ಮಂಡಿಸಿ, ಪ್ರೋತ್ಸಾಹಕ ಬಹುಮಾನ ಮೆಮೆಂಟೊ, ಪ್ರಶಸ್ತಿ ಪತ್ರ ಹಾಗೂ 1000ರೂ. ನಗದು ಪುರಸ್ಕಾರಗಳನ್ನು ಪಡೆದಿರುತ್ತಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಯತನ್ ಮತ್ತು ಕಾರ್ತಿಕ್ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಾದ ಧನುಷ್ ಮತ್ತು ಮುಬಶಿಲ್ ಭಾಗವಹಿಸಿ, ಪ್ರಶಸ್ತಿ ಪತ್ರವನ್ನು ಪಡೆದರು. ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ ಇವರು ಮಾರ್ಗದರ್ಶನ ನೀಡಿ ಸಹಕರಿಸಿದರೆಂದು, ಮುಖ್ಯಗುರು ತಿಳಿಸಿದ್ದಾರೆ.
