ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್ ನಾೖಕ್‌ ನಿಧನ

0

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಶ್ರೀಧರ್ ನಾೖಕ್‌ (58ವ.) ಅವರು ನ.16ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ಅವರು ಮಧೂರು ಮೂಲದವರಾಗಿದ್ದು ಪ್ರಸ್ತುತ ಕಬಕದಲ್ಲಿ ವಾಸ್ತವ್ಯವಿದ್ದರು. ಕೆಲ ತಿಂಗಳ ಹಿಂದೆಯಷ್ಟೆ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾಗಿದ್ದಾರೆ. 1996-97ರಲ್ಲಿ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಪ್ರಾರಂಭಿಸಿದ ಅವರು ಸ್ಕೌಟ್ ಸಂಯೋಜಕರಾಗಿ, ವಸತಿ ನಿಲಯದ ವಾರ್ಡನ್ ಆಗಿ ಹಾಗೂ ನಿರ್ವಹಣಾಧಿಕಾರಿಯಾಗಿ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು.

LEAVE A REPLY

Please enter your comment!
Please enter your name here