ನ.19ಕ್ಕೆ ಜಿಲ್ಲಾ ಮಟ್ಟದ ಅಟಲ್ ವಿರಾಸತ್‌ : ರಾಜ್ಯಾಧ್ಯಕ್ಷ ವಿಜಯೇಂದ್ರ ಪುತ್ತೂರಿಗೆ

0


ಪುತ್ತೂರು: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ `ಅಟಲ್ ವಿರಾಸತ್ ‘ – ಬೃಹತ್ ಸಮಾವೇಶ ನ.19ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ಅಟಲ್ ವಿರಾಸತ್‌ನ ಸಂಚಾಲಕ ವಿಧಾನಪರಿಷತ್ ಸದಸ್ಯರಾಗಿರುವ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.


ನ.19ರಂದು ಬೆಳಗ್ಗೆ 10ಕ್ಕೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಿಲ್ಲೆಯ ಎಲ್ಲಾ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ ಅವರು ಕಾರ್ಯಕ್ರಮದ ಯಶಸ್ಸಿಗೆ ಪ್ರತಿ ಬೂತ್ ಮಟ್ಟದಿಂದ ಕಾರ್ಯಕರ್ತರು, ಹಿರಿಯರು ಬರಲಿದ್ದಾರೆ. ಉತ್ಸವ ರೀತಿಯಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ ಎಂದರು.


ಪುತ್ತೂರು ಬಿಜೆಪಿಯ ಶಕ್ತಿ ಕೇಂದ್ರ:
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಈ ರಾಷ್ಟ್ರಕ್ಕೆ ಮತ್ತು ಸಂಘಟನೆ ಕೊಟ್ಟಿರುವ ಅನೇಕ ಸಂಘಟನಾತ್ಮಕ ಸಂಗತಿಗಳನ್ನು ನೆನಪು ಮಾಡುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಒಟ್ಟು ಪುತ್ತೂರು ಬಿಜೆಪಿಗೆ ಶಕ್ತಿಯ ಕೇಂದ್ರ. ಈ ಕೇಂದ್ರದಲ್ಲಿ ಅಟಲ್ ವಿರಾಸತ್ ಮಾಡುವ ಸಂಕಲ್ಪವಿತ್ತು. ಈ ಕಾರ್ಯಕ್ರಮಕ್ಕೆ ಮುಂದೆ ಬಿಜೆಪಿ ಜನಸಂಘದ ಕಾಲದಿಂದ ಪಾರ್ಟಿಗಾಗಿ ದುಡಿದ ಅನೇಕ ಹಿರಿಯರನ್ನು ಗೌರವಿಸುವ ಕೆಲಸ ಜಿಲ್ಲಾ ಸಮಿತಿಯಿಂದ ಆಗಿತ್ತು. ನಾಳಿದ್ದು ಕೂಡಾ ಅಂತಹ ಕೆಲವರನ್ನು ಗುರುತಿಸಿ ಅಭಿನಂದಿಸು ಕಾರ್ಯ ನಡೆಯಲಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಸುನಿಲ್ ಆಳ್ವ, ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಪಿ.ಬಿ, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಚಂದ್ರಶೇಖರ್ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.


1991ರಲ್ಲಿ ಭಾಷಣ ಮಾಡಿದ ಸ್ಥಳದಲ್ಲೇ ಅಟಲ್ ವಿರಾಸತ್
ಕಾರ್ಯಕ್ರಮದ ವಿಶೇಷತೆಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರು 1991ರಲ್ಲಿ ಪುತ್ತೂರಿಗೆ ಬಂದು ಭಾಷಣ ಮಾಡಿದ ಸ್ಥಳ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲೇ ಇದೀಗ ಅಟಲ್ ವಿರಾಸತ್ ಕಾರ್ಯಕ್ರಮ ನಡೆಯಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೆನಪು ಮಾಡುವ ಪ್ರದರ್ಶನ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮದ ಸಂಪರ್ಕಕ್ಕಾಗಿ ಬೂತ್ ಮಟ್ಟದ ಎಲ್ಲಾ ಹಿರಿಯ ಕಿರಿಯರು ಒಂದಾಗಿ ಒಟ್ಟಾಗಿ ಓಡಾಟ ಮಾಡಿದ್ದಾರೆ. ಬೂತ್‌ನಲ್ಲಿ ಅತ್ಯಂತ ಉತ್ಸಾಹದ ವಾತಾವರಣವಿದೆ.
ಸತೀಶ್ ಕುಂಪಲ, ಜಿಲ್ಲಾಧ್ಯಕ್ಷರು ಬಿಜೆಪಿ

LEAVE A REPLY

Please enter your comment!
Please enter your name here