ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ : ಕಿರಿಯ ವಿಭಾಗದಲ್ಲಿ ಹೊಸಗದ್ದೆ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನ.13ರಂದು ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.


ಶಾಲೆಯ ವಿದ್ಯಾರ್ಥಿಗಳಾದ ಅಬ್ದುಲ್ ರಹಿಮಾನ್ 4ನೇ-ಅರೇಬಿಕ್ ಪಠಣ ಪ್ರಥಮ, ಶ್ರಾವ್ಯ ಕೆ.4ನೇ- ಭಕ್ತಿಗೀತೆ ದ್ವಿತೀಯ, ದೇಶಭಕ್ತಿ ಗೀತೆ ಪ್ರಥಮ, ಅದ್ವಿತ್ 4ನೇ- ಸಂಸ್ಕೃತ ಪಠಣ ಪ್ರಥಮ, ಧನ್ವಿ 4ನೇ- ಆಶುಭಾಷಣ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಹಿರಿಯ ವಿಭಾಗದಲ್ಲಿ ಜಯಪ್ರೀತ 7ನೇ- ಕ್ಲೇಮಾಡೆಲ್ ತೃತೀಯ, ಫಾತಿಮತ್ ಅಶಿಮಾ 6ನೇ- ಇಂಗ್ಲಿಷ್ ಕಂಠಪಾಠ ದ್ವಿತೀಯ, ಸನ್ನಿಧಿ 7ನೇ- ಹಿಂದಿಕಂಠ ಪಾಠ ದ್ವಿತೀಯ, ಹವ್ಯಶ್ರೀ 5ನೇ-ಸಂಸ್ಕೃತ ಪಠಣ ತೃತೀಯ, ತಶ್ವಿನ್ 7ನೇ-ಮಿಮಿಕ್ರಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ವಿದ್ಯಾ, ಶಿಕ್ಷಕರಾದ ಮಾಲತಿ, ಪವಿತ್ರ, ಚಿತ್ರಾವತಿ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here