





ವಿಟ್ಲ: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ನ.18ರಂದು ಕೊಳ್ನಾಡು ಗ್ರಾಮದ ಬಾರೆಬೆಟ್ಟು ಎಂಬಲ್ಲಿ ನಡೆದಿದೆ.


ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಪ್ರಸ್ತುತ ಅರಬ್ ದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಲತೀಫ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.





ನ.18ರಂದು ರಾತ್ರಿ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಸಹಿತ ಮಳೆಯಾಗಿದ್ದು ಈ ವೇಳೆ ಘಟನೆ ಸಂಭವಿಸಿದೆ. ಸಿಡಿಲು ಬಡಿದ ಸಂದರ್ಭದಲ್ಲಿ ಮನೆಯೊಳಗೆ ಪುಟಾಣಿ ಮಗು ಹಾಗೂ ಇಬ್ಬರು ಮಹಿಳೆಯರಿದ್ದರು. ಮಗುವಿನ ಕಿವಿಗೆ ಗಾಯವಾಗಿದೆ. ಅಬ್ದುಲ್ ಲತೀಫ್ ಅವರು ಅರಬ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿ ಇರುವುದಾಗಿ ಮಾಹಿತಿ ಲಭಿಸಿದೆ.










