ಪುತ್ತೂರು: ಕಾನೂನು ಬದ್ದ ವೇತನವನ್ನೇ ನೀಡದ ಬೀಡಿ ಮಾಲಕರ ವಿರುದ್ದ ಬೀಡಿ ಕಾರ್ಮಿಕರ ಅನಿರ್ದಿಷ್ಟ ಕಾಲದ ಧರಣಿ ನ.24 ರಿಂದ ನಡೆಯಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಖ್ಯಾತ ನ್ಯಾಯವಾದಿ ಪಿ.ಕೆ.ಸತೀಶನ್, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್, ಖಜಾಂಜಿ ಈಶ್ವರಿಶಂಕರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ.24ರಿಂದ ಮಂಗಳೂರು ಕ್ಲಾಕ್ ಟವರ್ ಬಳಿ ಮತ್ತು ನ.28ರಂದು ಸಾವಿರಾರು ಕಾರ್ಮಿಕರು ಸೇರಿ ಮಂಗಳೂರು ಸಹಾಯಕ ಕಾರ್ಮಿಕ ಕಚೇರಿ ಪ್ರತಿಭಟನೆ ನಡೆಯಲಿದೆ. ಕಾನೂನು ಬದ್ದ ವೇತನ ಜಾರಿಗೆ ಮತ್ತು 7 ವರ್ಷಗಳ ಬಾಕಿ ವೇತನ ಬಾಕಿ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಬೀಡಿ ಕಾರ್ಮಿಕರ ಅನಿರ್ದಿಷ್ಟಕಾಲದ ನಿರಂತರ ಧರಣಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ನ.24ರಿಂದ ಮಂಗಳೂರು ಕ್ಲಾಕ್ ಟವರ್ ಬಳಿ ಮತ್ತು ನ.28ರಂದು ಸಾವಿರಾರು ಕಾರ್ಮಿಕರು ಸೇರಿ ಮಂಗಳೂರು ಸಹಾಯಕ ಕಾರ್ಮಿಕ ಕಚೇರಿ ಪ್ರತಿಭಟನೆ ನಡೆಯಲಿದೆ. ಕಾನೂನು ಬದ್ದ ವೇತನ ಜಾರಿಗೆ ಮತ್ತು 7ವರ್ಷಗಳ ಬಾಕಿ ವೇತನ ಬಾಕಿ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಬೀಡಿ ಕಾರ್ಮಿಕರ ಅನಿರ್ದಿಷ್ಟಕಾಲದ ನಿರಂತರ ಧರಣಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
01.04.2025 ರಿಂದ ಪ್ರತಿ 1000 ಬೀಡಿಗೆ ಕರ್ನಾಟಕ ಸರಕಾರ ನಿಗದಿಗೊಳಿಸಿದಂತೆ ಕನಿಷ್ಟ ಕೂಲಿ ಡಿ.ಎ. ಸೇರಿ ಪ್ರತಿ 1000 ಬೀಡಿಗೆ ರೂ.301.92 ರಂತೆ ಬೀಡಿ ಮಾಲಕರು ಬೀಡಿಕಾರ್ಮಿಕರಿಗೆ ನೀಡಬೇಕಿದ್ದರೂ ನೀಡುತ್ತಿಲ್ಲ. ಈ ಕನಿಷ್ಟ ಕೂಲಿ ಸರಕಾರ ಪ್ರತಿ 1000 ಬೀಡಿಗೆ ರೂ 270 ಕನಿಷ್ಟ ಕೂಲಿ ಹಾಗೂ ಡಿ.ಎ. ಸೇರಿ 01.04.2024 ರಿಂದ 287.04 ರಂತೆ ವೇತನ ನೀಡಬೇಕಿದ್ದರೂ ಮಾಲಕರು 31.03.2025 ತನಕ ನೀಡಿದ ವೇತನ ಪ್ರತಿ 1000 ಬೀಡಿಗೆ ಕೇವಲ ರೂ 263.80 ಮಾತ್ರ. ಪ್ರತಿ 1000 ಬೀಡಿಯ ವೇತನದಲ್ಲಿ ರೂ 23.24 ರಂತೆ ಬಾಕಿ ಮಾಡಿದ್ದಾರೆ. 01.04.2018 ರಿಂದ 31.03.2025 ತನಕ ಕೂಡಾ ಸರಕಾರ ನಿಗದಿ ಪಡಿಸಿದ ವೇತನದಲ್ಲಿ ಪ್ರತಿ 1000 ಬೀಡಿಯ ವೇತನದಲ್ಲಿ ರೂ. 39.98 ರಂತೆ ವೇತನ ಬಾಕಿ ಮಾಡಿ ಕಾರ್ಮಿಕರನ್ನು ಬೀಡಿ ಮಾಲಕರು ವಂಚಿಸಿದ್ದಾರೆ. ವರ್ಷದಲ್ಲಿ 1ಲಕ್ಷ ಬೀಡಿ ಕಟ್ಟಿದ್ದರೂ ತಲಾ ರೂ.24,000 ದಷ್ಟು ಪ್ರತಿಯೊಬ್ಬ ಬೀಡಿ ಕಾರ್ಮಿಕರಿಗೂ ವೇತನ ಬಾಕಿ ಆಗಿದೆ. ಬೀಡಿ ಮಾಲಕರ ಪರವಾಗಿ ಸರಕಾರ ಕಾರ್ಮಿಕರ ವೇತನವನ್ನು ಹಿಮ್ಮುಖವಾಗಿ ನಿಗದಿಗೊಳಿಸಿ ಆದೇಶ ಮಾಡಿರುವುದು ಒಂದು ದೊಡ್ಡ ಹಗರಣವಾಗಿದೆ ಎಂದು ಬಿ.ಎಮ್ ಭಟ್ ಟೀಕಿಸಿದ್ದಾರೆ.
