ಪುತ್ತೂರು: ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯವು (NAL) ತನ್ನ 51ನೇ “ಕಣಾದ” ವಾರ್ಷಿಕ ಸಂಚಿಕೆಗಾಗಿ ರಾಜ್ಯಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಹೈಸ್ಕೂಲ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಋತ್ವಿಕ್ ಮೊಳೆಯಾರ್ ಬರೆದ “ಹಸಿರು ರಸಾಯನ ಶಾಸ್ತ್ರ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರ”(Green Chemistry and its role in Environmental Protection) ಎಂಬ ಪ್ರಬಂಧವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಇದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನ.21ರಂದು ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದಲ್ಲಿ ನಡೆಯಿತು. ಋತ್ವಿಕ್ ಕುರಿಯ ಗ್ರಾಮದ ಮೊಳೆಯಾರ್ ಶ್ರೀಲಕ್ಷ್ಮೀ ಮೊಳೆಯಾರ್ ಮತ್ತು ರವಿರಾಜ ಮೊಳೆಯಾರ್ ದಂಪತಿಗಳ ಪುತ್ರ.