ಪುತ್ತೂರು:ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ‘ಪ್ರತಿಭಾನ ‘ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 19 ನವೆಂಬರ್, 2025 ರಂದು ನಡೆಯಿತು. ಈ ‘ಪ್ರತಿಭಾನ’ ದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಕಿರಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಗೊಂಡಿತು.

ಹಿರಿಯರ ವಿಭಾಗದಲ್ಲಿ ಸಾನ್ವಿ ಹಚ್. ಡಿ – ಕನ್ನಡ ಕಂಠಪಾಠ (ಪ್ರಥಮ), ಅನಘ ಸರಸ್ವತಿ -ಹಿಂದಿ ಕಂಠಪಾಠ (ಪ್ರಥಮ), ಪೂರ್ವಿ ಭಟ್ -ಸಂಸ್ಕೃತ ಪಠಣ (ಪ್ರಥಮ), ರುತ್ವಿಕ್.ಆರ್. ರೈ – ದೇಶಭಕ್ತಿ ಗೀತೆ (ಪ್ರಥಮ), ಋತ್ವಿಜ್- ಇಂಗ್ಲಿಷ್ ಕಂಠಪಾಠ (ದ್ವಿತೀಯ), ಫಾತಿಮಾತ್ ಅನ್ಫಾ – ಅರೇಬಿಕ್ ಪಠಣ (ತೃತೀಯ), ಮಹಿಮಾ- ಪ್ರಬಂಧ ರಚನೆ (ತೃತೀಯ),ಆರಾಧ್ಯ ಕೃಷ್ಣ-ಕಥೆ ಹೇಳುವುದು (ತೃತೀಯ), ಶ್ರೀಪರ್ಣ-ಅಭಿನಯ ಗೀತೆ (ತೃತೀಯ), ವೈಷ್ಣವಿ.ಕೆ- ಭಕ್ತಿಗೀತೆ(ತ್ರತಿಯ), ಅಭಿಜ್ಞಾ-ಆಶುಭಾಷಣ (ತೃತೀಯ), ನಿಶಾಂತ್. ಎಸ್-ಮಿಮಿಕ್ರಿ (ತೃತೀಯ) ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿರುತ್ತಾರೆ.
ಕಿರಿಯರ ವಿಭಾಗದಲ್ಲಿ ದಿಶಾನಿ.ಎಸ್ ರೈ-ಕನ್ನಡ ಕಂಠಪಾಠ (ಪ್ರಥಮ)ಶೌರಿ ಹಿಳ್ಳೆಮನೆ ದೇಶಭಕ್ತಿ ಗೀತೆ (ಪ್ರಥಮ) ಜಾಹ್ನವಿ ಕೆ ಭಕ್ತಿ ಗೀತೆ(ಪ್ರಥಮ) ಅರ್ಘ್ಯ ಕೋಲ್ಪೆ ಆಶುಭಾಷಣ (ತೃತೀಯ) ಚಿತ್ರ ಕಲೆ ಹನ್ಸಿಕಾ ಬಿ ಬಿ(ತೃತೀಯ) ಇಂಗ್ಲಿಷ್ ಕಂಠಪಾಠ ದ್ಯಾನ್ವಿ ಕೆ ವ್ಯೆ(ತೃತೀಯ) ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.