ಹನುಮಗಿರಿ ಮೇಳದ 9ನೇ ವರ್ಷದ ತಿರುಗಾಟ : ನ.25ರಂದು ಹನುಮಗಿರಿ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ “ಅಶ್ವಮೇಧ”

0

ಪುತ್ತೂರು: ಕಳೆದ ಪತ್ತನಾಜೆಗೆ ತಿರುಗಾಟ ನಿಲ್ಲಿಸಿದ್ದ ಯಕ್ಷಗಾನ ಮೇಳಗಳ ತಿರುಗಾಟ ಮಳೆಗಾಲ ಕಳೆದು ಈ ವರ್ಷದಲ್ಲಿ ಮತ್ತೆ ಆರಂಭಗೊಂಡಿದೆ. ತೆಂಕುತಿಟ್ಟಿನಲ್ಲಿ ಗಜಮೇಳವೆಂದೇ ಪ್ರಸಿದ್ಧಿ ಪಡೆದ, ಯಕ್ಷಗಾನ ಮಹಾಪೋಷಕರಾದ ಜಿ.ಕೆ.ಮಹಾಬಲೇಶ್ವರ ಭಟ್‌ರವರ ನೇತೃತ್ವದ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ 9ನೇ ವರುಷದ ತಿರುಗಾಟಕ್ಕೆ ಸಜ್ಜಾಗಿದೆ.

ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ನ.25ರಂದು ಹನುಮಗಿರಿ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ ನಡೆಯುವುದರೊಂದಿಗೆ ಹನುಮಗಿರಿ ಮೇಳದ ತಿರುಗಾಟ ಆರಂಭಗೊಳ್ಳಲಿದೆ. ಸಂಜೆ 5 ಗಂಟೆಗೆ ಗೆಜ್ಜೆಕಟ್ಟುವ ಕಾರ್ಯಕ್ರಮ ನಡೆದು ಬಳಿಕ ಪ್ರಥಮ ಸೇವೆಯಾಟ ಅಶ್ವಮೇಧ ಕಥಾಪ್ರಸಂಗ ನಡೆಯಲಿದೆ ಎಂದು ಮೇಳದ ಪ್ರಕಟಣೆ ತಿಳಿಸಿದೆ.

ಈ ವರ್ಷದ ನೂತನ ಪ್ರಸಂಗ ವರ್ಣ ಪಲ್ಲಟ
ಹನುಮಗಿರಿ ಮೇಳದ ತಿರುಗಾಟದಲ್ಲಿ ಪ್ರತೀ ಬಾರಿ ನೂತನ ಪ್ರಸಂಗವನ್ನು ನೀಡುತ್ತಿದ್ದು ಈ ಬಾರಿ ವಾಸುದೇವ ರಂಗಾಭಟ್ ಸಂಯೋಜನೆಯಲ್ಲಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಪದ್ಯರಚನೆಯಲ್ಲಿ ವರ್ಣ ಪಲ್ಲಟ ನೂತನ ಕಥಾಪ್ರಸಂಗ ರಂಗದಲ್ಲಿ ವೈಭವೀಕರಿಸಲಿದೆ.

LEAVE A REPLY

Please enter your comment!
Please enter your name here