ಗೌರವಾಧ್ಯಕ್ಷ: ರಮೇಶ್ ನಾಯಕ್, ಅಧ್ಯಕ್ಷ: ಪ್ರಭಾಕರ ಸಾಮಾನಿ, ಪ್ರಧಾನ ಕಾರ್ಯದರ್ಶಿ: ದೀಕ್ಷಿತ್
ಪುತ್ತೂರು: ಕೋಡಿಂಬಾಡಿಯ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದ 2025-2026ನೇ ಸಾಲಿನ ವಾರ್ಷಿಕ ಮಹಾಸಭೆ ನ. 23ರಂದು ಸಂಘದ ಗೌರವಾಧ್ಯಕ್ಷ ರಮೇಶ್ ನಾಯಕ್ ನಿಡ್ಯರವರ ಅಧ್ಯಕ್ಷತೆಯಲ್ಲಿ ಕೋಡಿಂಬಾಡಿಯ ಶಿವ ಕಾಂಪ್ಲೆಕ್ಸ್ ನ ಗಣೇಶ್ ಡ್ರೆಸ್ಸಸ್ ನಲ್ಲಿ ನಡೆಯಿತು.
ಬಳಗದ ಅಧ್ಯಕ್ಷ ದಯಾನಂದ ಪಲ್ಲತ್ತಾರು ಸ್ವಾಗತಿಸಿದರು. ಕಾರ್ಯದರ್ಶಿ ದೀಕ್ಷಿತ್ ಎಂ.ಎಲ್. ಮೇಲಿನಹಿತ್ಲು 2024-2025ನೇ ಸಾಲಿನ ವಾರ್ಷಿಕ ವರದಿ ವಾಚಿಸಿ ಕೋಶಾಧಿಕಾರಿ ಯೋಗೀಶ್ ಯಸ್.ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು ಆಯ-ವ್ಯಯಗಳ ಲೆಕ್ಕಪತ್ರ ಮಂಡಿಸಿದರು. ಬಳಿಕ 2025-2026ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ರಮೇಶ್ ನಾಯಕ್ ನಿಡ್ಯ, ಅಧ್ಯಕ್ಷರಾಗಿ ಪ್ರಭಾಕರ್ ಸಾಮಾನಿ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಎಂ.ಎಲ್. ಮೇಲಿನಹಿತ್ಲು ಬಾರಿಕೆ ,ಕೋಶಾಧಿಕಾರಿಯಾಗಿ ಯೋಗೀಶ್ ಯಸ್.ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಉಪಾಧ್ಯಕ್ಷರಾಗಿ ಯುವರಾಜ ಪಲ್ಲತ್ತಾರು, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪಿಜಿನಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ ಗೌಡ ಗೌಡ ದಡಿತ್ತಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾಧವ ಗೌಡ ಬರೆಮೇಲು, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ ಬರೆಮೇಲು, ಶ್ರೀನಿವಾಸ ನಾಯ್ಕ ದಾಸಕೋಡಿ ಮತ್ತು ದಯಾನಂದ ಪಲ್ಲತ್ತಾರು ಅವರನ್ನು ಆಯ್ಕೆ ಮಾಡಲಾಯಿತು.
