ಪುತ್ತೂರು: ಕಲಾಪೋಷಕ ಕುಂಬ್ರ ಬಾಲಕೃಷ್ಣ ರೈ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಸಂಸ್ಮರಣೆ-ಗೌರವಾರ್ಪಣೆಆರ್ಥಿಕ ಸಹಾಯ ಕಾರ್ಯಕ್ರಮ ನ.22 ರಂದು ಕುಂಬ್ರದಲ್ಲಿ ನಡೆಯಿತು.
ಸಭಾಧ್ಯಕ್ಷರಾಗಿ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮನಾಥ ರೈ ಭಾಗವಹಿಸಿದ್ದರು. ದೀಪ ಪ್ರಜ್ವಲನೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಒಳತಡ್ಕದ ಸದಸ್ಯ ಜಿ. ಮಹಾಬಲ ರೈ ನೆರವೇರಿಸಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ದಿವಂಗತ ಬಾಲಕೃಷ್ಣ ರೈ ಯವರ ಸಂಸ್ಮರಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಸರಪ್ಪಾಡಿ ಅಶೋಕ್ ಶೆಟ್ಟಿ, ಪ್ರಕಾಶಚಂದ್ರ ರೈ ಕೈಕಾರ, ಮೋನಪ್ಪ ಪೂಜಾರಿ ಬಡಕ್ಕೋಡಿ, ನಾರಾಯಣ ರೈ ಬಾರಿಕೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ
ಹಿರಿಯ ಯಕ್ಷಗಾನ ಕಲಾವಿದರನ್ನು ಗೌರವಿಸಲಾಯಿತು. ಅಶಕ್ತ 5 ಜನರಿಗೆ ನಗದು ವಿತರಿಸಿದರು. ಒಟ್ಟು 50,000 ರೂ ಮೊತ್ತವನ್ನು ನೀಡಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುಂದರ ರೈ ಮಂದಾರ ಇವರನ್ನು ಗೌರವಿಸಲಾಯಿತು.ಪುಟಾಣಿ ಹಂಸಿಕ ಪ್ರಾರ್ಥಿಸಿ,ಉದ್ಯಮಿ ಮೋಹನದಾಸ್ ರೈ ಸ್ವಾಗತಿಸಿ, ರಾಜಪ್ರಕಾಶ್ ರೈ ವಂದಿಸಿ, ತಾರಾನಾಥ್ ರೈ ನೀರಳ ಕಾರ್ಯಕ್ರಮ ನಿರೂಪಿಸಿದರು.
