ಹಾಸ್ಟೇಲ್ ನಿವೃತ್ತ ಮೇಲ್ವಿಚಾರಕಿ ವಿಜಯಲಕ್ಷ್ಮೀ ಬಿ.ಆರ್.ರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಕಬಕದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ.ಕುಮಾರ್ ಮಾಸ್ಟರ್‌ರವರ ಪತ್ನಿ, ಹಾಸ್ಟೇಲ್ ನಿವೃತ್ತ ಮೇಲ್ವಿಚಾರಕಿ ವಿಜಯಲಕ್ಷ್ಮೀ ಆರ್.ಬಿರವರ ಶ್ರದ್ದಾಂಜಲಿ ಸಭೆಯು ಸವಣೂರುನಲ್ಲಿ ನ.28 ರಂದು ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ವಿಜಯಲಕ್ಷ್ಮೀಯವರ ನೆನಪು ಅ”ಮರ” ವಾಗಲಿ ಎಂಬ ನಿಟ್ಟಿನಲ್ಲಿ ಉಚಿತವಾಗಿ ಸಸಿ ವಿತರಣೆ ಮಾಡಲಾಯಿತು. ಕೇಶವ ಮಾಸ್ಟರ್ ಸುಳ್ಯ, ನಿವೃತ್ತ ಶಾಖಾ ಪ್ರಬಂಧಕರ ಸುಂದರ ಮೇರರವರುಗಳು ನುಡಿ ನಮನ ಸಲ್ಲಿಸಿದರು. ವಿಜಯಲಕ್ಷ್ಮೀಯವರ ನೆನಪಿನಲ್ಲಿ ಪರಿಸರ ಉಳಿಸುವ ಅವರ ಮಹತ್ವ ಪೂರ್ಣ ಆಲೋಚನೆ ಸರ್ವರಿಗೂ ಮಾದರಿ ವಿಜಯ ಲಕ್ಷ್ಮಿರವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಅವರ ಮಕ್ಕಳಾ ಡಾ. ಶಿವಪ್ರಸಾದ್ ಕೆ. ವಿ, ಶರತ್ ಕೆ. ವಿ, ಭರತ್ ಕೆ. ವಿ ಮತ್ತು ಅವರ ಕುಟುಂಬವು ಅಮ್ಮನ ನೆನಪಿಗಾಗಿ ವಿತರಿಸಿರುವ ಸಸಿ ಪ್ರತಿ ಮನೆಯಲ್ಲಿ ಪರಿಸರದಲ್ಲಿ ಮರವಾಗಿ ಬೆಳೆದು ಪರಿಸರ ಸಂರಕ್ಷಣೆ ಮಾಡಲಿ ಅವರ ಅಮ್ಮನ ನೆನಪು ಆ “ಮರ” ವಾಗಲಿ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಿದರು.


ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಪುತ್ತೂರು ತಾ.ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪುಳು, ಸುಳ್ಯ ತಾ.ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಬಾಬು ಮಾಸ್ತರ್ ತೆಗ್ಗು, ಪಿಡಿಓ ವೆಂಕಟೇಶ್ ಪುಚ್ಚೆಗುತ್ತು ಸಹಿತ ಹಲವು ಮಂದಿ ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here