ಮರಿಕೆ ಸಾವಯವ ಮಳಿಗೆಯ ಮೂರನೇ ಮಳಿಗೆ ಮರಿಕೆ ಪ್ಯಾರಡೈಸ್ ಶುಭಾರಂಭ

0

ಪುತ್ತೂರು:ಮರಿಕೆ ಸಾವಯವ ಮಳಿಗೆಯವರ ಮೂರನೇ ಸಂಸ್ಥೆ ಮರಿಕೆ ಪ್ಯಾರಡೈಸ್ ಡಿ.1ರಂದು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಮುಂಭಾಗದ ತ್ರೀನೇತ್ರ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.


ಮಳಿಗೆಯನ್ನು ಉದ್ಘಾಟಿಸಿದ ಮ್ಹಾಲಕರ ತಂದೆ ಎ.ಪಿ ಸದಾಶಿವ ಮಾತನಾಡಿ, ನಮ್ಮ ಮರಿಕೆ ಕುಟುಂಬದಿಂದ ಬಂದಿದ್ದರೂ ಸುಹಾಸ್‌ಗೆ ವ್ಯಾಪಾರದ ಮೇಲೆ ಮೋಹ, ಎಳೆಯ ವಯಸ್ಸಿನಲ್ಲಿಯೇ ತಾನು ವ್ಯಾಪಾರ ಮಾಡುವುದಾಗಿ ತಿಳಿಸುತ್ತಿದ್ದ. ವ್ಯಾಪಾರ ಪ್ರಾರಂಭಿಸಿ, ಅದನ್ನು ಛಲದಿಂದ ನಿರ್ವಹಿಸಿದ್ದಾನೆ. ಮೂರನೇ ಮಳಿಗೆ ಪ್ರಾರಂಭಗೊಂಡಿದ್ದು ಗ್ರಾಹಕರ ಹಿಂದಿನಂತೆ ಸಹಕಾರ ನೀಡುವಂತೆ ಮನವಿ ಮಾಡಿದರು.


ಮುಖ್ಯ ಅತಿಥಿ ಮಂಗಳೂರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮಾತನಾಡಿ, ಕೃಷಿ ಮತ್ತು ವ್ಯವಹಾರ ಒಟ್ಟಿಗೆ ಸಾಗುವುದು ಉತ್ತಮ. ಇದರಿಂದ ಊರಿನ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಉತ್ಕೃಷ್ಠ ಗುಣಮಟ್ಟದ ಒಣಹಣ್ಣುಗಳ ಎಕ್ಸ್‌ಕ್ಲೂಸಿವ್ ಮಳಿಗೆಯಾಗಿದ್ದು, ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳು ದೊರೆಯಲಿದೆ ಎಂದರು. ಕಟ್ಟಡದ ಪಾಲುದಾರ ಗಿರಿಧರ ಹೆಗ್ಡೆ ಮಾತನಾಡಿ, ಕಟ್ಟಡದ ಉದ್ಘಾಟನೆ ಆದ ದಿನವೇ ಮರಿಕೆಯವರ ಮಳಿಗೆ ಇದೇ ಕಟ್ಟಡದಲ್ಲಿ ಶುಭಾರಂಭಗೊಂಡಿದೆ. ಒಂದೇ ವರ್ಷದಲ್ಲಿ ಒಂದೇ ಕಟ್ಟಡದಲ್ಲಿ ಮೂರನೇ ಮಳಿಗೆ ಪ್ರಾರಂಭಗೊಂಡಿದೆ. ನೈಸರ್ಗಿಕ ಮತ್ತ ಸಾವಯವ ಉತ್ಪನ್ನಗಳು ನಮ್ಮ ಕಟ್ಟಡದಲ್ಲಿದ್ದು ಮರಿಕೆ ಸಾವಯವ ಮಳಿಗೆಯು ಪುತ್ತೂರಿನ ಜನತೆಗೆ ಆರೋಗ್ಯದಾಯಕ ಸಂಸ್ಥೆಯಾಗಿದೆ ಎಂದರು.


ಪ್ಯಾರಡೈಸ್ ಹೆಸರು ಅನಾವರಣ
ಮರಿಕೆ ಸಾವಯವ ಮಳಿಗೆಯವರ ಮೂರನೇ ಸಂಸ್ಥೆ ಮರಿಕೆ ಫ್ಯಾರಡೈಸ್ ಮಳಿಗೆಯ ಹೆಸರನ್ನು ಮಂಗಳೂರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಅನಾವರಣಗೊಳಿಸಿದರು. ಸಂಸ್ಥೆಯ ಮ್ಹಾಲಕ ಸುಹಾಸ್ ಮರಿಕೆ ಸ್ವಾಗತಿಸಿದರು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ನಿರಂಜನ ಪೋಳ್ಯ ಕಾರ್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.

2018ರಲ್ಲಿ ಕಾಲೇಜು ಶಿಕ್ಷಣ ಮುಗಿಸಿ ನಂತರದ ಏಳು ವರ್ಷದಲ್ಲಿ ವಿವಿಧ ಮಜಲು ದಾಟಿಬಂದು ಈಗ ಸ್ವಂತ ಮರಿಕೆ ಸಾವಯವ ಮಳಿಗೆ ಮುನ್ನಡೆಯುತ್ತಿದೆ. ಈಗಾಗಲೇ ಇರುವ ಸಾವಯವ ಉದ್ಯಮಕ್ಕೆ ಹೊಂದಿಕೆಯಾಗಿ ಆಡುಕಲೆ ಮತ್ತು ಕಲ್ಬಾವಿ ಎಂಬ ಎರಡು ಕಂಪನಿಗಳ ಒಣಹಣ್ಣುಗಳ ಎಕ್ಸಕ್ಲೂಸಿವ್ ಮಳಿಗೆಯ ಮೂಲಕ ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳನ್ನು ನೀಡಲಾಗುತ್ತಿದೆ.
ಸುಹಾಸ್ ಮರಿಕೆ, ಮ್ಹಾಲಕರು

LEAVE A REPLY

Please enter your comment!
Please enter your name here