




ಪುತ್ತೂರು: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಪ್ರಕ್ರಿಯೆಗೆ ರಾಜ್ಯ ಸರಕಾರದಿಂದ ಅನುಮೋದನೆ ಸಿಕ್ಕಿದ್ದು ಮೊದಲ ಹಂತದಲ್ಲಿ 300 ಬೆಡ್ ನ ಆಸ್ಪತ್ರೆ ನಿರ್ಮಾಣವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. ಇದರ ಪ್ರಯುಕ್ತ ಶಾಸಕ ಅಶೋಕ್ ರೈ ಅವರು ಮಠಂತಬೆಟ್ಟು ಮಹಿಷಮರ್ದಿನಿ ದೆವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.




ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಹಲವು ಬಾರಿ ನಾನು ದೇವಿಯ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೆ. ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನೆ ಎಂದು ಶಾಸಕರು ಪ್ರತಿಕ್ರಿಯೆ ನೀಡಿದರು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಶಾಸಕರು ಭಾವುಕರಾಗಿ ದೇವರ ಮುಂದೆ ಕಣ್ಣೀರು ಹಾಕಿದರು. ನನ್ನ ಕ್ಷೇತ್ರದ ಜನರ ಒಳಿತಿಗಾಗಿ ನಾನು ಮೆಡಿಕಲ್ ಕಾಲೇಜು ಕೊಡಿಸು ಎಂದು ಬೇಡಿಕೊಂಡೆ, ನನ್ನ ಪ್ರಾರ್ಥನೆಯನ್ನು ಆಲಿಸಿದ ದೇವಿಗೆ ಶರಣು ಎಂದು ಹೇಳಿ ಭಾವುಕರಾದರು.





ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ಅಶೋಕ್ ರೈ, ಕೃಷ್ಣಪ್ರಸಾದ್ ಆಳ್ವ, ಪ್ರಮುಖರಾದ ನಿರಂಜನ್ ರೈ ಮಠಂತಬೆಟ್ಟು, ಮುರಳೀಧರ್ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರಭಟ್, ವಿಕ್ರಂ ಶೆಟ್ಟಿ, ಶಿವಪ್ರಸಾದ್ ರೈ, ರಾಧಾಕೃಷ್ಣ ನಾಯಕ್, ಮೋನಪ್ಪ ಗೌಡ, ದಾಮೋದರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಸದಾಶಿವ ರೈ, ಡಾ. ರಘು, ಡಾ. ರಾಜಾರಾಂ ಬಿಕೆ, ತನಿಯಪ್ಪ, ಮಿತ್ರದಾಸ ರೈ, ಶಿವರಾಮ ಆಳ್ವ, ರಂಜಿತ್ ಬಂಗೇರ, ರೇಣುಕಾ ರೈ, ಭವ್ಯ ಶೆಟ್ಟಿ, ಕುಮಾರನಾಥ , ವಿಜಯಲಿಂಗಪಾಲು, ಪದ್ಮನಾಭ ಶೆಟ್ಟಿ, ವಿನಯ್ ಸುವರ್ಣ, ಸಂತೋಷ್‌ಕುಮಾರ್ ರೈ, ಕೇಶವ ಭಂಡಾರಿ ಕೈಪ, ಪ್ರಭಾಕರ ಸಾಮಾನಿ, ಗಂಗಾಧರ ಶೆಟ್ಟಿ, ರೂಪೇಶ್ ರೈ, ಸುದೇಶ್ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಸತೀಶ್ ನಾಯ್ಕ್, ರಾಜೇಶ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.










