ಪುತ್ತೂರು: ರಾಷ್ಟ್ರೀಯ ಗಣಿತ ದಿನಾಚರಣೆಯ ಪ್ರಯುಕ್ತ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಗಣಿತ ಹಬ್ಬ-2025 ಕಾರ್ಯಕ್ರಮ ನವಂಬರ್ 23 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ 5 ಸ್ಪರ್ಧೆಗಳು ಹಾಗೂ ಗುಂಪು ವಿಭಾಗದಲ್ಲಿ 5 ಸ್ಪರ್ಧೆಗಳು ನಡೆದಿರುತ್ತದೆ.
*ವೈಯಕ್ತಿಕ ವಿಭಾಗ*
ಒರಿಗಾಮಿ: ನಿಲಿಶ್ಕ (ಶ್ರೀ ದಿನೇಶ್ ನಾಯಕ್ ಕೆ ಜಿ ಮತ್ತು ಶ್ರೀಮತಿ ಸ್ಮಿತಾ ಶ್ರೀ ದಂಪತಿಗಳ ಪುತ್ರಿ) ಪ್ರಥಮ, ಲೆಕ್ಕಾಚಾರ ಮಾಡು: ನಿರೀಕ್ಷಿತ್ ಹೆಗಡೆ (ಶ್ರೀ ನಿಶ್ಚಯ ಕುಮಾರ್ ಹೆಗಡೆ ಮತ್ತು ಶ್ರೀಮತಿ ನಾಗರತ್ನ ದಂಪತಿಗಳ ಪುತ್ರ) ಪ್ರಥಮ, ಗಣಿತ ಹಾಡು: ಸುಪ್ರಜಾ ರಾವ್ (ಡಾ. ಪ್ರಶಾಂತ ರಾವ್ ಮತ್ತು ಶ್ರೀಮತಿ ಸುಮನ ದಂಪತಿಗಳ ಪುತ್ರಿ)
*ಗುಂಪು ವಿಭಾಗ*
ರಸಪ್ರಶ್ನೆ :ಯತಿನ್ ( ಶ್ರೀ ಶೇಷಪ್ಪ ಗೌಡ ಎಚ್ ಮತ್ತು ಶ್ರೀಮತಿ ಹೇಮಾವತಿ ಜಿ ದಂಪತಿಗಳ ಪುತ್ರ) ಮತ್ತು ಪ್ರಮಥ್ ಶಾನುಭಾಗ್ ( ಶ್ರೀ ಪ್ರಸಾದ್ ಶಾನಭಾಗ್ ಮತ್ತು ಶ್ರೀಮತಿ ಗೀತಾ ಕುಮಾರಿ ದಂಪತಿಗಳ ಪುತ್ರ) ಪ್ರಥಮ ಸ್ಥಾನ,
ಗಣಿತ ಮುಖಾಭಿನಯ: ಶ್ರೀರಂಜಿನಿ ( ಶ್ರೀ ಎಂ ರಾಮಕೃಷ್ಣ ಭಟ್ ಮತ್ತು ಶ್ರೀಮತಿ ಗೀತಾ ಸರಸ್ವತಿ ದಂಪತಿಗಳ ಪುತ್ರಿ) ಮತ್ತು ನಿನಾದ ( ಶ್ರೀ ನವೀನ್ ಮತ್ತು ಶ್ರೀಮತಿ ಅರ್ಚನಾ ದಂಪತಿಗಳ ಪುತ್ರಿ) ದ್ವಿತೀಯ, ಗಣಿತ ಡಾಕ್ಯುಮೆಂಟರಿ: ಕೌಶಿಕ್ ಬಡೆಕರ್ (ಶ್ರೀ ಸತೀಶ್ ಕುಮಾರ್ ಮತ್ತು ಶ್ರೀಮತಿ ಜ್ಯೋತಿ ಸಿ ಕೆ ದಂಪತಿಗಳ ಪುತ್ರ) ಮತ್ತು ಓಂಕಾರ ಮಯ್ಯ (ಶ್ರೀ ಜಯಶೇಖರ್ ಮಯ್ಯ ಮತ್ತು ಲೀಲಾ ಮಯ್ಯ ದಂಪತಿಗಳ ಪುತ್ರ) ದ್ವಿತೀಯ, ಗಣಿತ ಮಾದರಿ: ಪಾವನಿ (ಶ್ರೀ ಕಿಶೋರ್ ವಸಿಷ್ಠ ಮತ್ತು ಶ್ರೀಮತಿ ರೂಪ ಆರ್ ದಂಪತಿಗಳ ಪುತ್ರಿ. ) ಮತ್ತು ಅನನ್ಯ ಆಚಾರ್ಯ ( ಶ್ರೀ ಪದ್ಮನಾಭ ಆಚಾರ್ಯ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ.
