ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ : ಉಪ್ಪಿನಂಗಡಿ ಸೈಂಟ್ ಮೇರಿಸ್ ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು:ಉಪ್ಪಿನಂಗಡಿಯ ವಲಯ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಪ್ರೌಢಶಾಲೆ ವಳಾಲು -ಬಜತ್ತೂರು ಇಲ್ಲಿ ನಡೆದಿದ್ದು ಉಪ್ಪಿನಂಗಡಿ ಸೈಂಟ್ ಮೇರೀಸ್  ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಮಕ್ಕಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 

ಇದರಲ್ಲಿ ಶಝಾ ಫಾತಿಮ -ಇಂಗ್ಲೀಷ್  ಭಾಷಣ(ಪ್ರಥಮ ), ದೀಪಿಕಾ -ಕನ್ನಡ ಭಾಷಣ (ಪ್ರಥಮ), ಧ್ರುವ ಎನ್. ಎಸ್ – ಚಿತ್ರಕಲೆ (ಪ್ರಥಮ ), ದಿಶಾಲಿ – ರಂಗೋಲಿ (ಪ್ರಥಮ ), ಕವ್ವಾಲಿ – ಸೃಜನಾ ಪಿ.ಸಿ, ಎಮ್. ಸಂಜನಾ ಭಟ್, ಕೀರ್ತನಾ ಪಿ.ಜಿ, ಶರಧಿ ಆಚಾರ್ಯ, ಅಭೀಕ್ಷಾ ಎಮ್. ಆರ್, ಮಹಮ್ಮದ್ ಶಾಝ್(ಪ್ರಥಮ), ಸಂಜನಾ ಪಿ. ಸಿ – ಜನಪದ ಗೀತೆ(ದ್ವಿತೀಯ ), ದ್ವಿತಿ ಆರ್ – ಚರ್ಚಾ ಸ್ಪರ್ಧೆ ( ದ್ವಿತೀಯ ), ಸುಹಾನಿ ಎಂ, ಶರಣ್ಯ ಸರಳಾಯ, ಕ್ರಿಶಲ್ ಲೋಬೋ, ಅನನ್ಯ, ವೈಷ್ಣವಿ, ಆರ್ ದಿವ್ಯಶ್ರೀ – ಜನಪದ ನೃತ್ಯ(ದ್ವಿತೀಯ), ಆದಿತ್ಯ ಕುಮಾರ್ ಶರ್ಮಾ – ಹಿಂದಿ ಭಾಷಣ(ತೃತೀಯ), ವಿವಿಟ ಲೋಬೋ, ಪ್ರಸಿದ್ಧಿ, ಚಿರಾಗ್, ಖುಷಿ, ಕೆ.ಸಿ ಶ್ರವಣ್ ಕುಂದ, ಶ್ರವಣ್ ಎನ್ ಜನಪದ ಗೀತೆಯ ಹಿನ್ನೆಲೆ ಗಾಯಕರಾಗಿ ಸಹಕರಿಸಿದರು ಹಾಗೂ ಇವರೆಲ್ಲರೂ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಇವರನ್ನು ಶಾಲಾ ಸಂಚಾಲಕರಾದ ವಂ.ಜೆರಾಲ್ಡ್ ಡಿ ಸೋಜ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀರಾ ಮರ್ಲಿನ್ ರೊಡ್ರಿಗಸ್, ಶಿಕ್ಷಕ ವೃಂದದವರು ಗೌರವಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here