ಸಪ್ತಶಕ್ತಿ ಸಂಗಮದ ಅಂಗವಾಗಿ ತೆಂಕಿಲ ವಿವೇಕಾನಂದ ಆ.ಮಾ ಶಾಲೆಯಲ್ಲಿ  ಮಾತೃ ಕಲಾ ಸಂಗಮ

0

ಪುತ್ತೂರು : ಸಂಘ ಶತಾಬ್ಧಿ ವರ್ಷದ ಪರಿಕಲ್ಪನಾನ್ವಯ ಮಾತೆಯರಲ್ಲಿರುವ ಕೀರ್ತಿ, ಐಶ್ವರ್ಯ , ವಾಕ್‍ಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆಯಂತಹ ಏಳು ಸದ್ಗುಣಗಳನ್ನು ಬಲಿಷ್ಠ ಭಾರತದ ಸಾಮಾಜಿಕ ಪರಿವರ್ತನೆಗಾಗಿ ಜಾಗೃತಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸಪ್ತಶಕ್ತಿ ಸಂಗಮದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ನ.29ರಂದು ಮಾತೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಪೂರ್ಣಿಮಾ ನಾವುಡ ಇವರು ದೀಪ ಬೆಳಗಿಸಿ, ಉದ್ಘಾಟಿಸಿ, ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ತರವಾದುದು, ನಾವು ಯಾವ ರೀತಿ ಪ್ರೇರಣೆಯಾಗಬಹುದು ಎಂಬುವುದನ್ನು ತನ್ನ ಅನುಭವದ ಮೂಲಕ ತಿಳಿಸಿ, ಶುಭ ಹಾರೈಸಿದರು. ಆಶಾ.ಕೆ ಭಗವದ್ಗೀತೆಯ ಹತ್ತನೇ ಅಧ್ಯಾಯದ 34ನೇ ಶ್ಲೋಕದಲ್ಲಿ ಉಲ್ಲೇಖಿತ ಮಹಿಳೆಯರ ಏಳು ಸದ್ಗುಣಗಳ ಬಗ್ಗೆ ಉಲ್ಲೇಖಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಷ್ಪಲತಾ.ಬಿ.ಕೆ ಅವರು ವೈಯಕ್ತಿಕ ಗೀತೆಯನ್ನು ಹಾಡುವುದರ ಜೊತೆಗೆ ಮಾತೆಯರು ಧ್ವನಿಗೂಡಿಸಿ ಅದ್ಭುತವಾಗಿ ಮೂಡುವಲ್ಲಿ ಸಹಕರಿಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪೋಷಕ ಮಾತೆಯರಿಗಾಗಿ ಆಯೋಜಿಸಿಲಾದ ರಂಗೋಲಿ, ಕಸದಿಂದ ರಸ, ಹೂ ಕಟ್ಟುವುದು ಮತ್ತು ರಸಪ್ರಶ್ನೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ ಮಾತೆಯರು ತಮ್ಮ ಆಸಕ್ತಿಗೆ ಶಾಲಾ ವೇದಿಕೆ ಅವಕಾಶ ನೀಡುತ್ತಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಶಾಲಾ ಶಿಕ್ಷಕ-ಶಿಕ್ಷಕಿ ವೃಂದವರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.

ಕೆ.ಜಿ.ವಿಭಾಗ ಮುಖ್ಯಸ್ಥೆ ಮಮತಾ.ಬಿ, ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಸಂಧ್ಯಾ.ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹನ ಪೈ ಸ್ವಾಗತಿಸಿ, ಪುಷ್ಪಲತಾ.ಕೆ ವಂದಿಸಿ, ಆಶಾ.ಕೆ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here