ಕೇರಳದ ಮುನಾರ್‌ ನಿಂದ ಸೋನಿಯಾ ಗಾಂಧಿ ಚುನಾವಣಾ ಕಣಕ್ಕೆ

0

ಪುತ್ತೂರು: ಕೇರಳದ ಮುನಾರ್‌ ನಿಂದ ಸೋನಿಯಾಗಾಂಧಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಇದು ನಿಜವೇ?

ಹೌದು ಹೌದು ಹೌದು….. ಸೋನಿಯಾ ಗಾಂಧಿ ಮುನಾರ್‌ ನಿಂದ ಚುನಾವಣೆಗೆ ಸ್ಫರ್ಧಿಸಲಿದ್ದಾರೆ. ಅದರಲ್ಲೂ ಅವರು ಸ್ಫರ್ಧಿಸುತ್ತಿರುವುದು ಸ್ಥಳೀಯ ಪಂಚಾಯತ್‌ ಚುನಾವಣೆಗೆ. ಅಷ್ಟು ಮಾತ್ರವಲ್ಲ, ಸೋನಿಯಾ ಗಾಂಧಿ ಸ್ಫರ್ಧಿಸುತ್ತಿರುವುದು ಬಿಜೆಪಿ ಪಕ್ಷದಿಂದ. ಅಚ್ಚರಿಯಾಗುತ್ತಿದೆಯಲ್ಲವೇ? ಯಾಕೆಂದರೆ ಸ್ಪರ್ಧಿಸುತ್ತುರುವವರು ಸೋನಿಯಾ ಗಾಂಧಿ.

ಆದರೆ ನೀವಂದುಕೊಂಡಂತೆ ಇವರು “ಆ”ಸೋನಿಯಾ ಅಲ್ಲ. ಕೇರಳದ ಗುಡ್ಡಗಾಡು ಪ್ರದೇಶವಾದ ಮುನಾರ್‌ ನ ನಲ್ಲತಣ್ಣಿ ವಾರ್ಡ್‌ ನಿಂದ ಸ್ಪರ್ಧಿಸುತ್ತಿರುವ 34 ವರ್ಷದ ಈ ಸೋನಿಯಾ ಸುಭಾಶ್‌ ಎಂಬವರ ಪತ್ನಿ. ಕೂಲಿ ಕಾರ್ಮಿಕರಾಗಿದ್ದ ದೊರೈ ರಾಜ್‌ ಕಾಂಗ್ರೆಸ್‌ ಕಾರ್ಯಕರ್ತ. ತನಗೆ ಹೆಣ್ಣು ಮಗು ಜನಿಸಿದಾಗ ಅಭಿಮಾನದಿಂದ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು. ಮುನಾರ್‌ ನ ಬಿಜೆಪಿ ಪಕ್ಷದ ಪಂಚಾಯತ್‌ ಕಾರ್ಯದರ್ಶಿಯಾಗಿದ್ದ ಸುಭಾಶ್‌ ಅವರನ್ನು ವಿವಾಹವಾದ ಬಳಿಕ ಪತಿಗೆ ಜತೆಯಾಗಿ ಬಿಜೆಪಿ ತೆಕ್ಕೆಗೆ ಸೇರಿದರು. ಈಗ ಸ್ಥಳೀಯ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಹೆಸರಿನ ಹಿನ್ನಲೆಯಲ್ಲಿ ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಮಂಜುಳಾ ರಮೇಶ್‌ ಮತ್ತು ಸಿಪಿಎಂ ಅಭ್ಯರ್ಥಿ ವಲಾಮೃತಿ ಇವರ ಪ್ರತಿ ಸ್ಪರ್ಧಿಗಳು. ಸೋನಿಯಾ ಗಾಂಧಿ ಹೆಸರಿನ ಈಕೆ ಚುನಾವಣೆ ಎದುರಿಸಲು ಹೊಣಕ್ಕೊಡ್ಡಿರುವುದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹೆಸರನ್ನು. ಹೆಸರಿನ ಮಹಿಮೆ ತಿಳಿಯಲು ಫಲಿತಾಂಶದ ವರೆಗೆ ಕಾಯಬೇಕು.

LEAVE A REPLY

Please enter your comment!
Please enter your name here