ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಗಳೂರು ಭೇಟಿ- ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್‌ರಿಂದ ಸಂವಿಧಾನ ಪೀಠಿಕೆ ನೀಡಿ ಗೌರವ

0

ಪುತ್ತೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ರವರು ಮಂಗಳೂರಿನ ಸರಕಾರಿ ವಸತಿ ಗೃಹದಲ್ಲಿ ಭೇಟಿಯಾಗಿ ಭಾರತೀಯ ಸಂವಿಧಾನದ ಪೀಠಿಕೆ ಫಲಕವನ್ನು ಮುಖ್ಯಮಂತ್ರಿಯವರಿಗೆ ನೀಡಿ ಗೌರವಿಸಿದರು. ಪುಟ್ಟ ಬಾಲಕಿ ಭಾರತೀಯ ಸಂವಿಧಾನ ಪೀಠಿಕೆಯನ್ನು ವಿಶ್ವವಿಖ್ಯಾತ ಮೈಸೂರು ದಸರಾ ಯುವ ಸಂಭ್ರಮದಲ್ಲಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದನ್ನು ಮುಖ್ಯ ಮಂತ್ರಿಗಳು ನೆನಪಿಸಿಕೊಂಡು ಬಾಲ ಪ್ರತಿಭೆ ಸೋನಿಕಾ ರವರನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪದ್ಮರಾಜ್ ಪೂಜಾರಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ರಾವ್, ಜಿಲ್ಲಾ ಸರಕಾರಿ ವಕೀರಾದ ಎಂ. ಪಿ ನೊರೋನ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ ಜಗನಾಥ ರೈ, ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಾಲ ಕಲಾವಿದೆ ಸೋನಿಕಾರವರು ಎಪಿಪಿ ಜನಾರ್ದನ್ ಬಿ ಮತ್ತು ಪ್ರಮೀಳಾರವರು ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here