ಪುತ್ತೂರು: ಟಿಂಬರ್ ಮತ್ತು ಫರ್ನಿಚೇರ್ ಸೇವೆಯಲ್ಲಿ ಸುಮಾರು 25 ವರ್ಷಗಳ ಇತಿಹಾಸ ಇರುವ ಪ್ರಸ್ತುತ ಸಂಪ್ಯದ ಕಾವೇರಿ ಸಂಕೀರ್ಣದಲ್ಲಿರುವ ಲಕ್ಷ್ಮೀ ಟಿಂಬರ್ ಮತ್ತು ಫರ್ನಿಚೇರ್ನ ನೂತನ ವಿಸ್ತೃತ ಮಳಿಗೆಯು ಡಿ.4ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಉದ್ಘಾಟಿಸಿದ ಹಿಂದು ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಪರಿಶ್ರಮ, ಶ್ರದ್ಧೆ ಇದ್ದಾಗ ಆ ಉದ್ಯಮ ಯಶಸ್ವಿಯಾಗಿ ಬೆಳೆಯುವುದಕ್ಕೆ ಭೀಮಯ್ಯ ಭಟ್ ಅವರೇ ಉದಾಹರಣೆ. ಉದ್ಯಮದ ಜೊತೆಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಅವರ ಉದ್ಯಮದ ಒಂದಷ್ಟು ಭಾಗವನ್ನು ಸಮಾಜಕ್ಕೆ ವಿನಿಯೋಗ ಮಾಡುತ್ತಿದ್ದಾರೆ. ಗುಣಮಟ್ಟದ ವ್ಯವಹಾರದಲ್ಲಿ ಮನೆ ಮಾತಾಗಿರುವ ಅವರ ಮಳಿಗೆಗೆ ಬೆಂಗಳೂರು, ಮೈಸೂರುಗಳಿಂದಲೂ ಗ್ರಾಹಕರನ್ನು ಆಕರ್ಷಿಸುತ್ತಿದ್ದು ಅದು ಅವರ ಗುಣಮಟ್ಟದ ಸೇವೆಗೆ ದೊರೆತ ಕೈಗನ್ನಡಿಯಾಗಿದೆ. ನಮ್ಮ ಕಚೇರಿಗೂ ಆವಶ್ಯಕವಾದ ಪೀಠೋಪಕರಣಗಳ ನೀಡಿ ನಮಗೂ ದೊಡ್ಡ ಸಹಕಾರ ನೀಡಿದ್ದಾರೆ. ಈ ಮಳಿಗೆಯಿಂದಲೇ ಪ್ರತಿಯೊಬ್ಬರು ಖರೀದಿಸಿ, ಇತರರು ತಿಳಿಸುವ ಮೂಲಕ ಸಂಸ್ಥೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಮಾತನಾಡಿ, ಸಂಪ್ಯದಲ್ಲಿ ಉದ್ಯಮ ಕ್ಷೇತ್ರದಲ್ಲಿ ಪ್ರಾರಂಭಿಸಿದವರು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ. ಭೀಮಯ್ಯ ಭಟ್ ತನ್ನ ಉದ್ಯಮವನ್ನು ಮುಕ್ರಂಪಾಡಿಯಿಂದ ಸಂಪ್ಯಕ್ಕೆ ಸ್ಥಳಾಂತರಿಸಿದ ಬಳಿಕ ಅವರು ಬೆಳೆಯುವ ಜೊತೆಗೆ ಇತರರನ್ನು ಬೆಳೆಸಿದ್ದಾರೆ. ನಮ್ಮ ಗ್ರಾಮಕ್ಕೆ ಹೊಸ ವ್ಯವಹಾರಗಳು ಬಂದಷ್ಟು ನಮಗೆ ಹೆಮ್ಮೆ. ಉದ್ಯಮಗಳು ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.

ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಭೀಮಯ್ಯ ಭಟ್ ಅವರು ಉದ್ಯಮದ ಜೊತೆಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡವರು. ತನ್ನ ಉದ್ಯಮದಲ್ಲಿ ಹೊಸತನವನ್ನು ಬೆಳೆಸಿಕೊಂಡು ಮುನ್ನಡೆಸುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.
ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮಾತನಾಡಿ, ನಗು ಮೊಗದ ಸೇವೆ ನೀಡುತ್ತಿರುವ ಭೀಮಯ್ಯ ಭಟ್ ಅವರ ಮಳಿಗೆಗೆ ನಾನು ದೊಡ್ಡ ಗ್ರಾಹಕ. ನನ್ನ ಸಂಸ್ಥೆಗೆ ಎಲ್ಲಾ ಫರ್ನಿಚೇರ್ಗಳಿಂದ ಇಲ್ಲಿಂದಲೇ ಖರೀದಿಸಲಾಗಿದೆ. ಗುಣಮಟ್ಟ ಜೊತೆಗೆ ಸೀಮಿತ ಬೆಲೆಗೆ ಹೆಸರು ವಾಸಿಯಾಗಿರುವ ಲಕ್ಷ್ಮೀ ಟಿಂಬರ್ ಮತ್ತು ಫರ್ನಿಚೇರ್ ಬೃಹತ್ ಮಟ್ಟದಲ್ಲಿ ವಿಸ್ತಾರವಾದ ಮಳಿಗೆ ಪ್ರಾರಂಭಗೊಂಡಿದ್ದು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ದರ್ಬೆ ಶುಭ ಸ್ಟೋರ್ಸ್ನ ಶ್ರೀಕೃಷ್ಣ ಭಟ್, ಉದ್ಯಮಿ ಜಯಕುಮಾರ್ ನಾಯರ್, ಅರ್ಚಕ ಸತ್ಯನಾರಾಯಣ ಭಟ್ ಕುರಿಯ, ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್., ಪ್ರವೀಣ್ ಭಂಡಾರಿ, ಶ್ರೀಮಾತಾ ಇಂಟೀರಿಯರ್ಸ್ನ ಉಮೇಶ್ ಕೋಡಿಬೈಲು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅನಿಲ್ ತೆಂಕಿಲ, ಕೃಷ್ಣಪ್ರಸಾದ್ ಶೆಟ್ಟಿ, ಮಾಸ್ಟರ್ ಪ್ಲಾನರಿಯ ಪ್ರಭಾಕರ, ಕೆನರಾ ಬ್ಯಾಂಕ್ನ ಸಂಪ್ಯ ಶಾಖಾ ವ್ಯವಸ್ಥಾಪಕಿ ದೀಪಾ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾನಾ ಸಮಿತ ಸದಸ್ಯ ಲಕ್ಷ್ಮಣ ಬೈಲಾಡಿ, ಸಹಿತ ಹಲವು ಮಂದಿ ಗಣ್ಯರು ಆಗಮಿಸಿ, ಶಜುಭಹಾರೈಸಿದರು. ರವಿಕುಮಾರ್ ರೈ ಕೆದಂಬಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೇಯಸ್ ವಂದಿಸಿದರು. ಮ್ಹಾಲಕ ಭೀಮಯ್ಯ ಭಟ್ ಅತಿಥಿಗಳನ್ನು ಶಾಲು ಹಾಕಿ, ಹೂ ಗುಚ್ಚ ನೀಡಿ ಗೌರವಿಸಿದರು.
ಕಳೆದ 25 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿರುವ ನಮ್ಮ ಮಳಿಗೆಯು ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳನ್ನೇ ನೀಡುತ್ತಾ ಬಂದಿದೆ. ನಮ್ಮಲ್ಲಿ ನುರಿತ ಅನುಭವೀ ಸಿಬ್ಬಂದಿಗಳಿಂದ ಆಕರ್ಷಕ ವಿನ್ಯಾಸದ, ಗ್ರಾಹಕರ ಮನ ಮೆಚ್ಚುವ ಮರದ ಫರ್ನಿಚೇರ್ ಗಳು, ಕ್ವಾಟ್, ಡೈನಿಂಗ್ ಟೇಬಲ್, ಬಾಗಿಲು, ದಾರಂದ, ಕಿಟಕಿಗಳು ಸೇರಿದಂತೆ ವಿವಿದ ಮರದ ಪೀಠೋಪಕರಣಗಳು, ವಿವಿಧ ಕಂಪನಿಗಳ ಬೆಡ್, ಕುಶನ್ ಗಳು ಮಳಿಗೆಯಲ್ಲಿ ಲಭ್ಯವಿದೆ. ಸ್ಟೀಲ್ ಮತ್ತು ಮರದ ಕಪಾಟುಗಳನ್ನು ಕ್ಲಪ್ತ ಸಮಯದಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುವುದು.-ಭೀಮಯ್ಯ ಭಟ್, ಮ್ಹಾಲಕರು