ಡಿ.6: ರೋಯಲ್ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನೆ

0

ಪುತ್ತೂರು: ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ರೋಯಲ್ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನಾ ಸಮಾರಂಭ ಡಿ.6ರಂದು ನಡೆಯಲಿದೆ.

ಶಾಸಕ ಅಶೋಕ್ ಕುಮಾರ್ ರೈ ಕಚೇರಿ ಉದ್ಘಾಟನೆ. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಸೀತಾರಾಮ ರೈ ಸವಣೂರು ಭದ್ರತಾ ಕೊಠಡಿ ಉದ್ಘಾಟನೆ, ಪರ್ಪುಂಜ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ಗಣಕ ಯಂತ್ರ ಮತ್ತು ಕೋರ್ ಬ್ಯಾಂಕಿಂಗ್ ಉದ್ಘಾಟನೆ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನ ನಿರ್ದೇಶಕ ಭಾರತಿ ಭಟ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಕೆ ಜಯರಾಮ ರೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಪ್ರಥಮ ಠೇವಣಿ ಪತ್ರ ಬಿಡುಗಡೆ, ಪುತ್ತೂರು ದ್ವಾರಕಾ ಕಾರ್ಪೊರೇಷನ್ ಪ್ರೈ.ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಸ್ವ-ಸಹಾಯ ಸಂಘ ಪುಸ್ತಕ ವಿತರಣೆ, ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಸ್ವ-ಸಹಾಯ ಸಂಘ ಪುರಸ್ಕಾರ, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಉಳಿತಾಯ ಖಾತೆ ಪುಸ್ತಕ ವಿತರಣೆ, ರೋಯಲ್ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆ ಸಲಹಾ ಸಮಿತಿ ಅಧ್ಯಕ್ಷ ಉಮಾಕಾಂತ್ ಬೈಲಾಡಿ ಪ್ರಥಮ ಸಾಲ ವಿತರಣೆ, ಕೆಯ್ಯೂರು ಬ್ರಹ್ಮಶ್ರೀ ಕಾಂಪ್ಲೆಕ್ಸ್ ಕಟ್ಟಡ ಮಾಲಕ ಜಯಂತ ಪೂಜಾರಿ ಕೆ, ಪಿಗ್ಮಿ ಕಸ್ಟಮ್ ಆಫ್ ಬಿಡುಗಡೆ ಮಾಡಲಿದ್ದಾರೆ ಎಂದು ಅಧ್ಯಕ್ಷ ಎ.ಕೆ ಜಯರಾಮ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here