ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್ ಬೆಳಕಿನ ಅಭಾವ

0

ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಪೌರಯುಕ್ತರಿಗೆ ಮನವಿ

ಪುತ್ತೂರು: ಪುತ್ತೂರಿನ ಕೇಂದ್ರ ಭಾಗದಲ್ಲಿರುವ ಕೋಟಿ ಚೆನ್ನಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್ ಬೆಳಕಿನ ಅಭಾವವಿದ್ದು, ಪ್ರಯಾಣಿಕರ ಹಾಗೂ ಆಟೋ ಚಾಲಕರ ನಡುವೆ ಉಂಟಾಗುವಂತಹ ಸಮಸ್ಯೆಯನ್ನ ಪರಿಹರಿಸುವ ನಿಟ್ಟಿನಲ್ಲಿ ತಕ್ಷಣವೇ ಪರಿಶೀಲನೆ ನಡೆಸಿ ಕಂಬದ ಸ್ಥಳ ಬದಲಾವಣೆ ಮಾಡುವಂತೆ ಆಗ್ರಹಿಸಿ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಪೌರಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಸ್ನೇಹ ಸಂಗಮದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ನೆಲ್ಲಿಕಟ್ಟೆ ವಲಯ ಕಾಂಗ್ರೆಸ್ ಅಧ್ಯಕ್ಷ ದಾಮೋದರ್ ಬಂಡಾರ್ಕರ್, ನಗರಸಭೆ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ಉದ್ಯಮಿ ಸಂದೀಪ್ ಹಾಗೂ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಇಸ್ಮಾಯಿಲ್ ಸಂಪ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here