ಪುತ್ತೂರಿನಲ್ಲಿ ಮಹಡಿಪ್ರದೇಶದ ಅನುಪಾತ (ಎಫ್.ಎ.ಆರ್) ಹೆಚ್ಚಳ ವಿಚಾರ : ನಗರಾಡಳಿತ ಕಾರ್ಯದರ್ಶಿ ಜೊತೆ ಶಾಸಕ ಅಶೋಕ್ ರೈ ಮಾತುಕತೆ

0

ಪುತ್ತೂರು: ಪುತ್ತೂರಿನಲ್ಲಿ ಮಹಡಿಪ್ರದೇಶ ಅನುಪಾತ (ಎಫ್.ಎ.ಆರ್) ಹೆಚ್ಚುವಂತೆ ನಗರಾಡಳಿತ ಇಲಾಖೆಯ ಕಾರ್ಯದರ್ಶಿ ದೀಪಾಚೋಳನ್ ಭೇಟಿಯಾದ ಶಾಸಕ ಅಶೋಕ್ ರೈ ಪುತ್ತೂರಿನಲ್ಲಿ ಮಹಡಿಪ್ರದೇಶ ಅನುಪಾತ (ಎಫ್.ಎ.ಆರ್) ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದರು.

ಶುಕ್ರವಾರ ಅಧಿಕಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಮಂಗಳೂರಿನಲ್ಲಿ ಇರುವಷ್ಟೆ ಎಫ್‌ಎಆರ್ ರೇಶಿಯೋವನ್ನು ಪುತ್ತೂರಿಗೂ ನೀಡಬೇಕು. ಪುತ್ತೂರು ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಇದು ಅಗತ್ಯವಾದ ಬೇಡಿಕೆಯಾಗಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಂಜೂರಾದ ಬಳಿಕ ದೊಡ್ಡ ಉದ್ಯಮಗಳು ಇಲ್ಲಿ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಎಫ್‌ಎಆರ್ ರೇಶಿಯೋ ಹೆಚ್ಚಳ ಮಾಡಬೇಕು. ಈ ವಿಚಾರದಲ್ಲಿ ಇಲಾಖೆ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.


ಪುತ್ತೂರಿನಲ್ಲಿ ವಸತಿ ಎಫ್‌ಎಆರ್ ರೇಶಿಯೋ 2.5 ಇದ್ದು ಮಂಗಳೂರಿನಲ್ಲಿ 5.5 ಇದೆ. ವಾಣಿಜ್ಯ ಸಂಕೀರ್ಣ ರೇಶಿಯೋ ಪುತ್ತೂರಿನಲ್ಲಿ 2 ರೇಶಿಯೋ ಇದ್ದು ಮಂಗಳೂರಿನಲ್ಲಿ 5.5 ಇದೇ ರೇಶಿಯೋವನ್ನು ಪುತ್ತೂರಿಗೂ ಅನ್ವಯ ಮಾಡುವಂತೆ ಶಾಸಕರು ಅಧಿಕಾರಿಗೆ ತಿಳಿಸಿದ್ದು, ಈ ಬಗ್ಗೆ ಶೀಘ್ರ ಇಲಾಖೆ ಕ್ರಮವಹಿಸಬೇಕು ಎಂದು ತಿಳಿಸಿದರು. ಪುತ್ತೂರು ನಗರದ ಬೊಳುವಾರು ಮತ್ತು ದರ್ಬೆಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಲ್‌ಗೆ ನಗರಾಡಳಿತ ಇಲಾಖೆಯಿಂದ ಅನುದಾನ ನೀಡುವ ಬಗ್ಗೆಯೂ ಶಾಸಕರು ಚರ್ಚೆ ನಡೆಸಿದರು.

LEAVE A REPLY

Please enter your comment!
Please enter your name here