ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇವರ ಆಶ್ರಯದಲ್ಲಿ ಸಂಘದ ಗುರುಪೂಜಾ ಕಾರ್ಯಕ್ರಮ ಡಿ.7ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ ಹರೀಶ್ ಶಾಂತಿ ಪುತ್ತೂರು ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟಿ ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷ ರಮೇಶ ಕೋಡಂದೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ಅಧ್ಯಕ್ಷ ಹರೀಶ್ ಶಾಂತಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಡಿ, ವಿಟ್ಲ ಜೇಸಿಐ ಅಧ್ಯಕ್ಷೆ ಸೌಮ್ಯ ಚಂದ್ರಹಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೌರವ ಸಮರ್ಪಣೆ
ಸ್ಥಳೀಯರಾದ ಹಿರಿಯ ದೈವಪಾತ್ರಿ,ಮೂರ್ತೆದಾರ ಸೇಸಪ್ಪ ಪೂಜಾರಿ ಹಿತ್ತಿಲು, ಸಂಘದ ಸ್ಥಾಪಕ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ ನಾಟೆಕಲ್ಲು, ಮೂರ್ತೆಗಾರಿಕೆರವರಾದ ನಾರಾಯಣ ಪೂಜಾರಿ ಕಲ್ಲಾಜೆ, ಸಾಂತಪ್ಪ ಪೂಜಾರಿ ಮಣಿಲ ರವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಪ್ರತಿಭಾ ಪುರಸ್ಕಾರ, ಅಭಿನಂದನೆ
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ಜಗತ್’ರಾಜ್ ಕೊಡಂಗೆ, ಅಪಾರ ಸರಕಾರಿ ವಕೀಲ ಉಲ್ಲಾಸ್ ಎಚ್ ಪುಣಚ ಹಾಗೂ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಗುವುದು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಿಲ್ಲವ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪುಣಚ ಕೋಟಿ ಚೆನ್ನಯ ಬಿಲ್ಲವ ಸಂಘದ ಪ್ರಕಟಣೆ ತಿಳಿಸಿದೆ.
