ಟಿ.ಎಂ.ಶಹೀದ್ , ಕೆ.ಎಂ. ಮುಸ್ತಫಾ ಮಾಪಳಡ್ಕಕ್ಕೆ ಭೇಟಿ

0

ಟಿ. ಎಂ. ಶಹೀದ್ ರವರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಸಹೀದ್ ತೆಕ್ಕಿಲ್ ಹಾಗು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ ರವರು ಮಾಪಳಡ್ಕ ದರ್ಗಾ ಶರೀಫ್ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಇರುವಂಬಳ್ಳ ಜಮಾಅತ್ ಹಾಗು ಮಾಪಳಡ್ಕ ದರ್ಗಾ ಶರೀಫ್ ಆಡಳಿತ ಸಮಿತಿಯ ವತಿಯಿಂದ ಟಿ. ಎಂ. ಶಹೀದ್ ರವರನ್ನು ಸನ್ಮಾನಿಸಲಾಯಿತು.

ಮಾಪಳಡ್ಕದಲ್ಲಿ ಸ್ತ್ರೀಯರ ನಮಾಝ್ ಕೊಠಡಿ,ಸ್ತ್ರೀಯರಿಗೆ ಪ್ರತ್ಯೇಕ ಕ್ಯಾಂಟೀನ್ ಹಾಗು ತಡೆಗೋಡೆ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಸರ್ಕಾರದಿಂದ ಸಿಗುವ ಅನುದಾನವನ್ನು ದೊರಕಿಸಿಕೊಡುವ ಭರವಸೆಯನ್ನು ಟಿ.ಎಂ‌.ಶಹೀದ್ ರವರು ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುದರ್ರಿಸ್ ಹಾಫಿಳ್ ಅಬ್ದುಲ್ ಸಲಾಂ ನಿಝಾಮಿ, ಜಮಾಅತ್ ಅಧ್ಯಕ್ಷರಾದ ಎ.ಬಿ.ಅಶ್ರಫ್ ಸಅದಿ ಅಡ್ಕ, ಉಪಾಧ್ಯಕ್ಷರಾದ ಧರ್ಮತಣ್ಣಿ ಹಸೈನಾರ್ , ಪ್ರಧಾನ ಕಾರ್ಯದರ್ಶಿ ಟಿ.ಎಚ್.ಮುಹಮ್ಮದ್ ಕುಂಞಿ ಹಾಜಿ,ಕಾರ್ಯದರ್ಶಿ ಟಿ.ಎಚ್.ಅಬೂಬಕ್ಕರ್,ಸದಸ್ಯರಾದ ಅಂದುಂಞಿ ಗೋರಡ್ಕ ಹಾಗು ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ಇದರ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ಉಪಸ್ಥಿತಿತರಿದ್ದರು.

ಇರುವಂಬಳ್ಳ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರಕಾರದ ಸಂಬಂಧಪಟ್ಟ ಸಚಿವರಿಂದ ಅನುದಾನ ಒದಗಿಸಿ ಕೊಡುವಂತೆ ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ರವರ ನೇತೃತ್ವದಲ್ಲಿ ಮನವಿಯೊಂದನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here