ಪುತ್ತೂರು: ಕರ್ನಾಟಕ ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜಸ್ಥಂಭ ಪುತ್ತೂರಿನಲ್ಲಿ ನಿರ್ಮಾಣವಾಲಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮ ಡಿ.6 ರಂದು ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ನೂತನ ದ್ವಜಸ್ಥಂಭಕ್ಕೆ ಶಿಲಾನ್ಯಾಸ ನೆರವೇರಿಸಿದರು. ಪುತ್ತೂರಿನ ನೆಲ್ಲಿಕಟ್ಟೆ ಪಾರ್ಕ್ನಲ್ಲಿ ಈ ರಾಷ್ಟ್ರಧ್ವಜ ರಾರಾಜಿಸಲಿದೆ.
ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಪಿ. ಶೆಟ್ಟಿ, ನಗರಸಭೆಯ ಪೌರಾಯುಕ್ತರಾದ ವಿದ್ಯಾಕಾಳೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪೂಡಾ ಮತ್ತು ನಗರಸಭೆಯ ಅಧಿಕಾರಿಗಳು ಭಾಗವಹಿಸಿದರು.
ಈ ದ್ವಜದ ಕಂಬ 80 ಮೀಟರ್ ಎತ್ತರವನ್ನು ಹೊಂದಿದ್ದು ದ್ವಜವು 45 ಅಡಿ ಅಗಲ ಮತ್ತು 20 ಅಡಿ ಉದ್ದವನ್ನು ಹೊಂದಿದೆ.
ಕರ್ನಾಟಕದ ಬೆಳಗಾವಿಯಲ್ಲಿ ಈ ರೀತಿಯ ಅತೀ ದೊಡ್ಡ ಧ್ವಜಸ್ಥಂಭವಿದ್ದರೆ ಹಂಪಿ ವಿಜಯನಗರದಲ್ಲಿರುವ ಧ್ವಜಸ್ಥಂಭ ಎರಡನೇ ಸ್ಥಾನದಲ್ಲಿದೆ ಮೂರನೇಯ ಅತೀ ದೊಡ್ಡ ಧ್ವಜಸ್ಥಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದ್ದು ನಾಲ್ಕನೇ ಸ್ಥಾನದಲ್ಲಿ ಮಂಗಳೂರಿನಲ್ಲಿರುವ ಧ್ವಜಸ್ಥಂಭ ಈ ಸಾಲಿಗೆ ಸೇರಿದೆ.
