ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆರ್ಧ್ರಾ ನಕ್ಷತ್ರದಂದು ನಡೆಯುವ ಮೃತ್ಯುಂಜಯ ಹೋಮ ಮತ್ತು ಶ್ರೀ ದೇವರಿಗೆ ಶುದ್ಧ ಎಳ್ಳೆಣ್ಣೆ ಅಭಿಷೇಕವು ಡಿ.6ರಂದು ನಡೆಯಿತು.

ಪ್ರತಿ ತಿಂಗಳ ಆರ್ಧ್ರಾ ನಕ್ಷತ್ರದಂದು ಮೃತ್ಯುಂಜಯ ಹೋಮ ನಡೆಯುತ್ತಿದ್ದು, ಭಕ್ತರು ಮೃತ್ಯುಂಜಯ ಹೋಮ ಸೇವೆ ಮಾಡಿಸುತ್ತಿದ್ದರು. ಇದೀಗ ಪ್ರತಿ ತಿಂಗಳ ಮೃತ್ಯುಂಜಯ ಹೋಮ ಸೇವೆಯ ಸಂದರ್ಭ ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕವು ಆರಂಭಗೊಂಡಿದ್ದು ಭಕ್ತರು ಸಮರ್ಪಣೆ ಮಾಡಿದ ಎಳ್ಳೆಣ್ಣೆಯನ್ನು ದೇವರಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕದ ಎಣ್ಣೆಯನ್ನು ಎಳ್ಳೆಣ್ಣೆ ಸಮರ್ಪಣೆ ಮಾಡಿದ ಸೇವಾದಾರರಿಗೆ ವಿತರಿಸಲಾಯಿತು.