




ಮಾಣಿ: ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿಗುತ್ತು ಧರ್ಮಚಾವಡಿಯಲ್ಲಿ ವರ್ಷಂಪ್ರತಿ ನಡೆಯುವ ಕಂಬಳಕೋರಿ ನೇಮಕ್ಕೆ ಗೊನೆಮುಹೂರ್ತ ಡಿ.6ರಂದು ಸಾಂಪ್ರದಾಯಿಕವಾಗಿ ನಡೆಯಿತು.




ಮುಂದಿನ ಎಂಟು ದಿನಗಳಲ್ಲಿ ಗ್ರಾಮದ ಮನೆಮನೆಗಳಿಗೆ ಕೊರಗತನಿಯ ಭೇಟಿ ನೀಡಿ ಕಂಬಳಕೋರಿ ಮತ್ತು ನೇಮದ ಹೇಳಿಕೆ ಕೊಡುವ ಪದ್ಧತಿ ನಡೆಯಲಿದ್ದು, ಏಳನೇ ದಿನ ರಾತ್ರಿ ಕಂಬಳ ಗದ್ದೆಯಲ್ಲಿ ಸಂಪ್ರದಾಯಗಳು ನೆರವೇರಿ, ಎಂಟನೇ ದಿನ ಡಿ.13 ರಂದು ಬೆಳಿಗ್ಗೆ ನಾಗತಂಬಿಲ, ದೈವಗಳಿಗೆ ತಂಬಿಲ, ಕಂಬಳಕ್ಕೆ ಪೂಕರೆ ಹಾಕುವುದು ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳಿಗೆ ಕಾಲಾವಧಿ ಕಂಬಳಕೋರಿ ನೇಮವು ಜರುಗಲಿದೆ.






ಗೊನೆಮುಹೂರ್ತದ ಸಂದರ್ಭದಲ್ಲಿ ನರೇಂದ್ರ ರೈ ನೆಲ್ತೊಟ್ಟು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟು, ಸಚ್ಚಿದಾನಂದ ಶೆಟ್ಟಿ ಮಾಣಿಗುತ್ತು, ಜಗನ್ನಾಥ ಚೌಟ ಬದಿಗುಡ್ಡೆ, ಬಾಲಕೃಷ್ಣ ಆಳ್ವ ಕೊಡಾಜೆ, ಜಗದೀಶ್ ಜೈನ್ ಮಾಣಿ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ ಬಂಗೇರ ಪಲ್ಲತ್ತಿಲ, ದೈವದ ಪರಿಚಾರಕರು, ಗ್ರಾಮಸ್ಥರು ಉಪಸ್ಥಿತರಿದ್ದರು.










