ನಿಡ್ಪಳ್ಳಿ: ದಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಆನಂದೋತ್ಸವ ಶಿಬಿರ ನಿಡ್ಪಳ್ಳಿ ದೇವಾಲಯದಲ್ಲಿ ಡಿ.7ರವರೆಗೆ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯದ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಶಿಬಿರವನ್ನು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ವಿನೋದ್ ರೈ ಗುತ್ತು ಉದ್ಘಾಟಿಸಿದರು. ಯೋಗ ಗುರುಗಳಾದ ಅರ್.ಕೆ.ಭಟ್ ಪೈರುಪುಣಿ ಇವರ ನೇತೃತ್ವದಲ್ಲಿ ಸುಮಾರು ಆರು ದಿನಗಳ ಕಾಲ ಪ್ರಾಣಾಯಾಮ, ಧ್ಯಾನ, ಜ್ಞಾನ ಮತ್ತು ಸುದರ್ಶನ ಕ್ರಿಯೆ ಮೂಲಕ ಆರೋಗ್ಯವಂತ ಜೀವನ ನಡೆಸುವ ಬಗ್ಗೆ ಶಿಬಿರ ನಡೆಯಿತು. ಹಿರಿಯ ಯೋಗ ಗುರುಗಳಾದ ನಾರಾಯಣ ಭಟ್ ಸುಳ್ಯ ಉಪಸ್ಥಿತರಿದ್ದರು. ಸುಮಾರು 22 ಮಂದಿ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡರು.
ಆನಂದೋತ್ಸವ ಶಿಬಿರ ನಡೆದ ಬಳಿಕ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಶ್ರಮದಾನ ನಡೆಯಿತು.