ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ರಜತ ಸಂಭ್ರಮದ ಅಂಗವಾಗಿ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಆನಾಜೆ ವೀರಮಂಗಲ ಇವರ ಸಹಕಾರದೊಂದಿಗೆ ವಿವಿಧ ಕ್ರೀಡಾ ಸಂಭ್ರಮವು ಡಿ.೭ರಂದು ವೀರಮಂಗಲ ಪಿ.ಎಂ.ಶ್ರೀ ಸ.ಹಿ.ಪ್ರಾ ಶಾಲೆ ಕ್ರೀಡಾಂಗಣದಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆನಾಜೆ ಶ್ರೀಮಹಾಲಿಂಗೇಶ್ವರ ಕಟ್ಟೆ ಪೂಜೆ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ದೀಪ ಬೆಳಗಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ನಂತರ ಕ್ರೀಡಾ ಸಂಭ್ರಮದಲ್ಲಿ ಪ್ರಾಥಮಿಕ ಶಾಲಾ ಕಿರಿಯ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, ಚೆಂಡೆಸೆತ, ಹಿರಿಯ ವಿದ್ಯಾರ್ಥಿಗಳಿಗೆ ಲಿಂಬೆ ಚಮಚ, ಛದ್ಮವೇಷ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 100 ಮೀ. ಓಟ, ಸಂಗೀತ ಕುರ್ಚಿ, ಮಹಿಳೆಯರಿಗೆ ಜನಪದ ಗೀತೆ, ಹಗ್ಗಜಗ್ಗಾಟ, ಇನ್ನಿತರ ಮನೋರಂಜನಾ ಆಟಗಳು, ಪುರುಷರಿಗೆ ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಪ್ರಥಮ ರೂ.7೦೦೦, ದ್ವಿತೀಯ ರೂ.5೦೦೦, ತೃತೀಯ ರೂ.3೦೦೦, ಚತುರ್ಥ ರೂ.2೦೦೦ ನಗದು ಹಾಗೂ ಶಾಶ್ವತ ಫಲಕ ನೀಡಲಾಯಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ವೀರಮಂಗಲ ಪಿಎಂಶ್ರೀ ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಎಸ್. ಮಾತನಾಡಿ, ಸಮಜದಲ್ಲಿ ಸೇವೆ ಹಾಗೂ ಸಂಘಟನೆಯೊಂದಿಗೆ ಬೆಳೆದು ಬಂದ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.
ಉಪಾಧ್ಯಕ್ಷ ಬೆಳಿಯಪ್ಪ ಗೌಡ ಮಾತನಾಡಿ, ಸೇವಾ ಪ್ರತಿಷ್ಠಾನದ 25 ವರ್ಷಗಳ ಕಾರ್ಯ ಸಾಧನೆಯನೆಯನ್ನು ತಿಳಿಸಿ, ಯುವಕರು ಸಂಘಟನೆಯಲ್ಲು ತೊಡಗಿಸಿಕೊಳ್ಳುವಂತೆ ಹೇಳಿದರು. ಉಡುಪಿ ಪೊಲೀಸ್ ಇಲಾಖೆಯ ಯೋಗೀಶ್ ವೀರಮಂಗಲ ಸಂದರ್ಭೋಚಿತವಾಗಿ ಮಾತನಾಡಿದರು.ವೀರಮಂಗಲ ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿಂತನ, ಅನನ್ಯ ಪ್ರಾರ್ಥಸಿದರು. ಮಹಾವಿಷ್ಣು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯ ಕುಮಾರ್ ವಂದಿಸಿದರು. ಹರ್ಷಗುತ್ತು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನಿರಂಜನ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.