ಆಲಂಕಾರು: ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ವ್ಯಾಪ್ತಿಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರವಾಗಿ ಬರಬೇಕಾಗಿದ್ದ ಬೆಳೆ ವಿಮೆ ಮೊತ್ತವನ್ನು ಪಾವತಿಸುವಾಗ ತುಂಬಾ ಕಡಿಮೆ ಮಾಡಿದ್ದು, ತೀರಾ ನಿರಾಶೆಯನ್ನು ತಂದಿರುವುದಲ್ಲದೆ,ಕೃಷಿ ಮಾಡುವ ಸಂದರ್ಭದಲ್ಲಿ ಮುಂದಿನ ಖರ್ಚು ವೆಚ್ಚಗಳ ಕುರಿತು ಹಣಕಾಸಿನ ಹೊಂದಾಣಿಕೆಗೆ ಕಷ್ಟವಾಗಿದೆ. ವಿಮೆ ವ್ಯಾಪ್ತಿಯನ್ನು ಪಡೆದ ಕೃಷಿಕರಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ದೊರಕಿಸಿ ಕೊಡುವ ಬಗ್ಗೆ ಗ್ರಾಮ ಮಟ್ಟದ ಹೋರಾಟಗಳು ಸರಕಾರ ಅಥವಾ ವಿಮಾ ಕಂಪೆನಿಗಳ ಮುಂದೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ, ಅದಕ್ಕಾಗಿ ದಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರ ಅಭಿಪ್ರಾಯದಂತೆ, ಡಿ.12 ರಂದು ಉಭಯ ಜಿಲ್ಲೆಗಳ ಪ್ಯಾಕ್ಸ್ ಗಳ ಅಧ್ಯಕ್ಷರು &ಸಿಇಓ ಗಳ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ಸೂಕ್ತ ತೀರ್ಮಾನವನ್ನು ಮಾಡಲು ಉದ್ದೇಶಿಸಲಾಗಿದೆ. ಸಂಘದ ಕಾರ್ಯ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ವಿಮಾ ಅವಧಿಯಲ್ಲಿ ಧಾಖಲಾಗಿರುವ ತಾಪಮಾನ ಮತ್ತು ಮಳೆಯ ನಿಖರವಾದ ಮಾಹಿತಿಯನ್ನು ಕಂದಾಯ ಹಾಗೂ ತೋಟಗಾರಿಕ ಇಲಾಖೆಯಿಂದ ಪಡೆಯಲು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಲಿಖಿತ ಪತ್ರವನ್ನೂ ಈಗಾಗಲೇ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ರಮೇಶ ಭಟ್ ಉಪ್ಪಂಗಳ ತಿಳಿಸಿದ್ದಾರೆ.
Home Uncategorized ಬೆಳೆ ವಿಮೆ ಪರಿಹಾರ ಮೊತ್ತ ಹೆಚ್ಚಿಸಲು ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ...
