ಪುತ್ತೂರು: ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.11ರಂದು ಶಾಲಾ ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಬೆಳ್ಳಿ ಹಬ್ಬದ ಪೂರ್ವ ತಯಾರಿಗಳು ಖರ್ಚು ವೆಚ್ಚಗಳ ವಿವರಗಳೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಶಾಖೆಯ ಮ್ಯಾನೇಜರ್ ಅತಿತ್ ರೈ, ಈ ಶಾಲೆ ಬೆಳೆದು ಬಂದ ದಾರಿ ಇಲ್ಲಿಯ ವಿದ್ಯಾರ್ಥಿಗಳ ಸಾಧನೆ ಹಾಗೂ ಶಿಕ್ಷಕರ ಶ್ರಮವನ್ನು ಕಂಡು ಮೆಚ್ಚುಗೆಯ ಮಾತುಗಳನ್ನಾಡಿದರು.
ಇರ್ದೇ- ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಬಗ್ಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಅಧ್ಯಕ್ಷ ಸ್ಥಾನವನ್ನು ವಹಿಸಿದ ರಂಗನಾಥ ರೈ ಗುತ್ತು, ಬೆಳ್ಳಿ ಹಬ್ಬದ ಸಮಾರೋಪಕ್ಕೆ ಸರ್ವರ ಸಹಕಾರ ಯಾಚಿಸಿದರು. ವೇದಿಕೆಯಲ್ಲಿ ಜಗನ್ಮೋಹನ ರೈ ಸೂ ರಂಬೈಲು ಉಪಸ್ಥಿತರಿದ್ದರು. ಮುಖ್ಯಗುರು ರಾಜೇಶ್ ಎನ್ ಕಾರ್ಯ ನಿರ್ವಹಿಸಿದರು.
