ಮೊದಲ ದಿನವೇ ಭರ್ಜರಿ ಪ್ರದರ್ಶನ ಕಂಡ -ವಿಭಿನ್ನ ತಂತ್ರಜ್ಞಾನದಿಂದ ಕೂಡಿದ ತುಳು ಚಿತ್ರ ’ಪಿಲಿಪಂಜ’

0

ಪುತ್ತೂರು: ತುಳುನಾಡಿನ ಮಣ್ಣಿನ ಕತೆಯನ್ನು ತೆರೆಗೆ ತರುವ ನಿಟ್ಟಿನಲ್ಲಿ ಕತ್ತಲು ಬೆಳಕಿನ ನಡುವಿನ ಸಸ್ಪೆನ್ಸ್ ಚಿತ್ರವಾಗಿರುವ ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ ’ಪಿಲಿಪಂಜ’ ತುಳು ಸಿನಿಮಾ ಡಿ.12ರಂದು ಪುತ್ತೂರು ಭಾರತ್ ಸಿನಿಮಾಸ್‌ನಲ್ಲಿ ಉದ್ಘಾಟನೆಗೊಂಡಿತು. ಮೊದಲ ದಿನವೇ ಭರ್ಜರಿ ಪ್ರದರ್ಶನವೂ ಕಂಡಿದೆ.


ತುಳು ಚಿತ್ರರಂಗದಲ್ಲಿ ವಿಭಿನ್ನ ತಂತ್ರಜ್ಞಾನದಲ್ಲಿ ಯಸ್‌ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್‌ನ ಅಡಿಯಲ್ಲಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ ಚಿತ್ರವನ್ನು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಿ ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿವರಿಗೆ ದೇವರ ಪ್ರಸಾದ ನೀಡಿ ಚಿತ್ರ ಉತ್ತಮವಾಗಿ ಮೂಡಿ ಬಂದು ರಾಜ್ಯಮಟ್ಟದಲ್ಲಿ ಸಿನಿಮಾ ತಂಡ ಮಿನುಗುವಂತೆ ಆಗಲಿ ಎಂದರು.

ತುಳು ನಾಟಕದ ಪೋಷಕರು ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿ ಭರತ್ ಶೆಟ್ಟಿ ಪುತ್ತೂರಿನ ಯುವಕ. ಅವರ ನೇತೃತ್ವದಲ್ಲಿ ಮೂಡಿ ಬಂದ ಚಿತ್ರ ಉತ್ತಮವಾಗಿ ಬೆಳೆಯಲಿ. ಪುತ್ತೂರಿನ ಜನತೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಮಾತನಾಡಿ ಚಿತ್ರದ ನಿರ್ಮಾಣ, ನಿರ್ದೇಶನ ನಟರು ಎಲ್ಲರು ಪುತ್ತೂರಿವರು ಎಂದಾಗ ಹೆಮ್ಮೆ ಆಗುತ್ತದೆ.

ಈ ಚಿತ್ರ ಹೆಚ್ಚು ದಿನ ಓಡಲಿ ಎಂದರು. ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾತನಾಡಿ ಈ ಚಿತ್ರ ನಾಡಿಗೆ ಬೆಳಕು ನೀಡಲಿ ಎಂದರು. ಉದ್ಯಮಿ ಶಿವರಾಮ ಆಳ್ವ ಅವರು ಮಾತನಾಡಿ, ತುಳು ಚಲನಚಿತ್ರಕ್ಕೆ ಪ್ರೋತ್ಸಾಹ ನೀಡುವ ಮೂಲಕ ತುಳು ಭಾಷೆಯನ್ನು ಬೆಳೆಸಬೇಕು ಎಂದರು. ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್ ಅವರು ಮಾತನಾಡಿ ದಕ್ಷಿಣ ಕನ್ನಡದ ತುಳು ಚಿತ್ರ ಪ್ರಸಿದ್ಧ. ಇಲ್ಲಿ ಬೇರೆ ಬೇರೆ ಕಲಾವಿದರಿಗೆ ಅವಕಾಶ ಸಿಗಲಿ. ಕಲಾವಿದರು ಬೆಳಕಿಗೆ ಬರಲಿ ಎಂದರು. ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ನಾನು ನಾಟಕ ಬರೆದಿದ್ದೆ. ನಾನು ತುಳು ಅಭಿಮಾನಿ. ಚಲನಚಿತ್ರ ಉದ್ಘಾಟಗೆ ಪ್ರಥಮ ಬಾರಿ ಬಂದಿರುವುದು ಹೆಮ್ಮೆಯಾಗಿದೆ ಎಂದರು.

ಚಿತ್ರದ ನಟ ಸುಂದರ ರೈ ಮಂದಾರ ಮೊದಲ ವಾರದಲ್ಲಿ ಹೆಚ್ಚಿನ ಜನರು ಚಿತ್ರವನ್ನು ನೋಡಿ ಸಹಕಾರ ನೀಡುವಂತೆ ಮನವಿ ಮಾಡಿದರು. ಇನ್ನೋರ್ವ ನಟ ರವಿ ರಾಮಕುಂಜ ಅವರು ಎಲ್ಲರು ಚಿತ್ರವನ್ನು ನೋಡುವಂತೆ ಮನವಿ ಮಾಡಿದರು. ಪ್ರಗತಿಪರ ಕೃಷಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ರೈ ನರಿಮೊಗರು ಅವರು ಮಾತನಾಡಿ ಹಿಂದೆ ಸಿನೆಮಾದ ನಟರು ಬೆಂಗಳೂರಿನವರು. ಇವತ್ತ ಚಿತ್ರದ ನಟರು ಊರಿನವರು. ಹಾಗಾಗಿ ಈ ಚಿತ್ರಕ್ಕೆ ಎಲ್ಲರು ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಗೀತಾ ಅವರು ಶುಭ ಹಾರೈಸಿದರು. ಭಾರತ್ ಸಿನಿಮಾಸ್‌ನ ಮ್ಯಾನೇಜರ್ ಜಯರಾಮ್ ವಿಟ್ಲ, ನಟ ನಿರ್ಮಾಪಕ ದಯಾನಂದ ರೈ ಬೆಟ್ಟಂಪಾಡಿ, ನಿರ್ದೇಶಕ ರಜಾಕ್ ಪುತ್ತೂರು, ಹೇಮಾ ಜಯರಾಮ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here