ಪುತ್ತೂರು: ಎಸ್ಸೆಸ್ಸೆಫ್ ಮೈದಾನಿಮೂಲೆ ಶಾಖೆಯ ವಾರ್ಷಿಕ ಮಹಾಸಭೆ ಮೈದಾನಿಮೂಲೆ ಸುನ್ನೀ ಸೆಂಟರ್ನಲ್ಲಿ ಕೆ.ಎಂ.ಜೆ ಅಧ್ಯಕ್ಷ ಯೂಸುಫ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್ಸೆಸ್ಸೆಫ್ ಮೈದಾನಿಮೂಲೆ ಶಾಖೆಯ ನೂತನ ಅಧ್ಯಕ್ಷರಾಗಿ ಇರ್ಶಾದ್ ಎ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ರಾಶಿದ್, ಕೋಶಾಧಿಕಾರಿಯಾಗಿ ಅನ್ಸಾರ್ ಎನ್ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಝೀಝ್ ಉಜ್ರೋಡಿ, ಕ್ಯೂಡಿ ಕಾರ್ಯದರ್ಶಿಯಾಗಿ ಸಾಬಿತ್ ಎ.ಕೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಹ್ಶೂಕ್ ಎ.ಕೆ, ದಅವಾ ಕಾರ್ಯದರ್ಶಿಯಾಗಿ ರವೂಫ್ ಹಾಶಿಮಿ, ಮೀಡಿಯಾ ಕಾರ್ಯದರ್ಶಿಯಾಗಿ ಅಲಿ ಸೈದುದ್ದೀನ್, ರೈಂಬೋ ಕಾರ್ಯದರ್ಶಿಯಾಗಿ ಸ್ವಾಲಿಹ್ ಎ.ಕೆ, ಸಿಸಿ ಕಾರ್ಯದರ್ಶಿಯಾಗಿ ಇಬ್ಸಾರ್ ಎ.ಕೆ ಆಯ್ಕೆಯಾದರು. ಸದಸ್ಯರುಗಳಾಗಿ ಸಾದಿಕ್ ಎ.ಕೆ, ಶಾಹಿದ್ ಯು.ಕೆ, ಜಾಬಿರ್ ಇಡಿಂಜಿಲ, ಮುಹಾಝ್ ಯು.ಕೆ, ಅಶ್ಫಾಕ್ ಯು.ಕೆ, ಅಸ್ಲಂ, ಝಾಹಿರ್, ಅಝ್ಮಲ್ ಯು.ಕೆ, ಆಶಿಕ್ ಯು.ಕೆ ಆಯ್ಕೆಯಾದರು.