ಡಿ.13: ನೆಲ್ಯಾಡಿಯಲ್ಲಿ ನಿವೃತ್ತ ಸೈನಿಕರ ಮಹಾಸಮ್ಮೇಳನ ’ವಿಜಯ್ ದಿವಸ್-2025’

0

ನೆಲ್ಯಾಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ನಿವೃತ್ತ ಸೈನಿಕರ ಮಹಾಸಮ್ಮೇಳನ ಹಾಗೂ 1971ರ ಇಂಡೋಪಾಕ್ ಯುದ್ಧದ ’ ವಿಜಯ ದಿವಸ್ 2025’ ಕಾರ್ಯಕ್ರಮ ಡಿ.13ರಂದು ಬೆಳಿಗ್ಗೆ ನೆಲ್ಯಾಡಿ ಬಿರ್ವ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.


ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ನೋರ್ಭಟ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಲ್ ನಿತಿನ್ ಬಿಡೆ ಉದ್ಘಾಟಿಸಲಿದ್ದಾರೆ. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ| ಶಿವಣ್ಣ ಎನ್.ಕೆ. ವಿಜಯ ದಿವಸ ಛಾಯಾ ಫಲಕ ಅನಾವರಣ ಮಾಡಲಿದ್ದಾರೆ. 1971ರ ಇಂಡೋ ಪಾಕ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರಿಗೆ ಮಾಜಿ ಸಂಸದೆ ಡಾ| ತೇಜಸ್ವಿನಿ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ನೆರವೇರಿಸಲಿದ್ದಾರೆ. ಶಾಸಕರಾದ ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಉಪ್ಪಿನಂಗಡಿ ವೃತ್ತ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಹೆಚ್.ಇ., ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್, ಎಕೆಎಂಎಸ್‌ಎಸ್ ವೀರನಾರಿ ರಾಜ್ಯಾಧ್ಯಕ್ಷೆ ಛಾಯಾ ಲಲಿತೇಶ್, ಉಪ್ಪಿನಂಗಡಿ ಆರಕ್ಷಕ ಠಾಣೆ ಪೊಲೀಸ್ ನಿರೀಕ್ಷಕ ಅವಿನಾಶ್ ಎಚ್., ಎಕೆಎಂಎಸ್‌ಎಸ್ ಸಂಚಾಲಕ ಮ್ಯಾಥ್ಯು ಟಿ.ಜಿ.ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here