ಪುತ್ತೂರು: ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಪುತ್ತೂರು ಕೆದಿಲ ವಳಕುಮೇರಿ ನಿವಾಸಿ ಆಶೀಶ್ ಅವರು ನೇಮಕಗೊಂಡಿದ್ದಾರೆ. ಅವರು ನೇಮಕಗೊಂಡ ಬೆನ್ನಲ್ಲೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಅವರಿಗೆ ದೇವಳದ ವತಿಯಿಂದ ಗೌರವ ಪ್ರಸಾದ ನೀಡಲಾಯಿತು.

ಆಶಿಶ್ ಶಂಕರ್ ಅವರು ಭಾರತೀಯ ವಾಯುಪಡೆಯ( ಎಫ್ಸಿಎಟಿ) ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ವಾರಣಾಸಿಯಲ್ಲಿ 5 ದಿನಗಳ ಎಸ್ಎಸ್ಬಿ ಸಂದರ್ಶನದಲ್ಲಿ ಮತ್ತು 5 ದಿನಗಳ ಸಂಪೂರ್ಣ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಅಂತಿಮ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಳಿಕ ಅವರು ತರಬೇತಿಗಾಗಿ ಹೈದರಾಬಾದ್ನ ವಾಯುಪಡೆ ಅಕಾಡೆಮಿಗೆ ಸೇರಲಿದ್ದಾರೆ. ಮುಂದೆ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡಿರುವ ಹಿನ್ನಲೆಯಲ್ಲಿ ಡಿ.13ರಂದು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಅಶೀಶ್ ಅವರಿಗೆ ದೇವಳದ ಗೌರವಾರ್ಥ ಶಲ್ಯ ತೊಡಿಸಿ ಗೌರವ ನೀಡಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ನೀಡಿದರು. ಈ ಸಂದರ್ಭ ಆಶೀಶ್ ಅವರ ತಂದೆ, ತಾಯಿ ಉಪಸ್ಥಿತರಿದ್ದರು.