ಕಡಬ ತಾ| ಪ್ರಥಮ ತುಳು ಸಮ್ಮೇಳನ ಸಮ್ಮೇಳನಾಧ್ಯಕ್ಷ ಕೆ.ಸೇಸಪ್ಪ ರೈಯವರಿಗೆ ಆಹ್ವಾನ

0

ರಾಮಕುಂಜ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳುಕೂಟ ರಾಮಕುಂಜ ಹಾಗೂ ತೆಗ್‌ರ್ ತುಳುಕೂಟ ನೂಜಿಬಾಳ್ತಿಲ ಇವರ ಆಶ್ರಯದಲ್ಲಿ ಡಿ.20 ಹಾಗೂ 21ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ದನ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿರುವ ಕೆ.ಸೇಸಪ್ಪ ರೈ ರಾಮಕುಂಜ ಅವರಿಗೆ ಸಮ್ಮೇಳನದ ಸ್ವಾಗತ ಸಮಿತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.


ಸಮ್ಮೇಳನ ಸ್ವಾಗತ ಸಮಿತಿ ಸದಸ್ಯರು ಕೆ.ಸೇಸ್ಪಪ ರೈ ರಾಮಕುಂಜ ಅವರ ಮನೆಗೆ ತೆರಳಿ ಸೇಸಪ್ಪ ರೈ ಹಾಗೂ ಅವರ ಪತ್ನಿಗೆ ಗೌರವಾರ್ಪಣೆ ಮಾಡಿ ಅಧಿಕೃತ ಆಹ್ವಾನ ನೀಡಿದರು. ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ದನ ಆಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರರೂ, ಪ್ರಥಮ ತುಳು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಿವರಾಮ ಶೆಟ್ಟಿ ಕೇಪು, ಸ್ವಾಗತ ಸಮಿತಿ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ, ಕಾರ್ಯದರ್ಶಿ ಸರಿತಾಜನಾರ್ದನ್, ಜೊತೆ ಕಾರ್ಯದರ್ಶಿ ಪ್ರೇಮಾ, ಕೇಪು ಶ್ರೀ ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಗೌಡ, ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ದನ ಆಂಜನೇಯ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಶ್ರೀಧರ ಶೆಟ್ಟಿ, ಕಡಬ ಶ್ರೀ ಶ್ರೀಕಂಠ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ರೈ ಹಳ್ಳಿ, ವಿಹಿಂಪ ಪುತ್ತೂರು ಜಿಲ್ಲೆ ಸಹಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನಂದಗುರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here