ಅಧ್ಯಕ್ಷರಾಗಿ ವಿಶ್ವನಾಥ್ ಪಿ, ಕಾರ್ಯದರ್ಶಿಯಾಗಿ ವಸಂತ್ ಅನಂತಿಮಾರ್ ಆಯ್ಕೆ
ಪುತ್ತೂರು: ಅಶ್ವ ಫ್ರೆಂಡ್ಸ್ ಬೀರನಹಿತ್ಲು(ರಿ) ಚಿಕ್ಕಮಡ್ನೂರು ಸಂಘಟನೆಯು ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದು ಇತ್ತೀಚೆಗೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಶ್ವ ಫ್ರೆಂಡ್ಸ್ ನ ಗೌರವಾಧ್ಯಕ್ಷರಾಗಿ ರಾಜು ಶೆಟ್ಟಿ, ಅಧ್ಯಕ್ಷರಾಗಿ ವಿಶ್ವನಾಥ್ ಪಿ, ಕಾರ್ಯದರ್ಶಿಯಾಗಿ ವಸಂತ್ ಅನಂತಿಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿಘ್ನೇಶ್ ಕೆಮ್ಮಾಯಿ, ಕೋಶಾಧಿಕಾರಿಯಾಗಿ ರಂಜಿತ್ ಹೆಚ್ ಜಿ, ನವೀನ್, ಉಪಕಾರ್ಯದರ್ಶಿಯಾಗಿ ನಾಗೇಶ್ ಕೆಮ್ಮಾಯಿ, ಖಜಾಂಜಿಯಾಗಿ ರೋಹಿತ್ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಜೀವನ್ ಕೆಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳ ಆಯ್ಕೆ 60 ಜನ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.