ಸವಣೂರು: ಹಿಂದೂ ಧಾರ್ಮಿಕ ಶಿಕ್ಷಣ ಸಮಿತಿ ಪಾಲ್ತಾಡಿ ಇದರ ವತಿಯಿಂದ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಮಾರ್ಗದರ್ಶನದಲ್ಲಿ ಧರ್ಮಾಭ್ಯುದಯ ಧಾರ್ಮಿಕ ಶಿಕ್ಷಣ ತರಗತಿಯ ಉದ್ಘಾಟನೆ ಡಿ.21ರಂದು ಚೆನ್ನಾವರ ಶ್ರೀ ಉಳ್ಳಾಕುಲು ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ 7.30ರಿಂದ ಗಣಪತಿ ಹೋಮ,ಬೆಳಿಗ್ಗೆ 9.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಧರ್ಮ ಶಿಕ್ಷಣ ಸಮಿತಿ ಪುತ್ತೂರು ಇದರ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಯಾಗಿ ಮಾಜಿ ಸಂಸದ, ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಾಲ್ಗೊಳ್ಳುವರು.ಅಧ್ಯಕ್ಷತೆಯನ್ನು ಹಿಂದೂ ಧಾರ್ಮಿಕ ಶಿಕ್ಷಣ ಸಮಿತಿ ಪಾಲ್ತಾಡಿಯ ಸಂಚಾಲಕ ಸುಬ್ರಾಯ ಗೌಡ ಪಾಲ್ತಾಡಿ ವಹಿಸುವರು.ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚೆನ್ನಾವರ,ಪುತ್ತೂರು ವಿವೇಕಾನಂದ ಪ.ಪೂ.ಕಾಲೇಜಿನ ಅಡಳಿತ ಮಂಡಳಿಯ ಸದಸ್ಯೆ ಇಂದಿರಾ ಬಿ.ಕೆ.,ಧಾರ್ಮಿಕ ಶಿಕ್ಷಣದ ಮುಖ್ಯಶಿಕ್ಷಕಿ ಪಾರ್ವತಿ ಕೆ. ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಗೀತಾ ಸಾಹಿತ್ಯ ಸಂಭ್ರಮ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11.30ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಮಧ್ಯಾಹ್ನ ಸಹಭೋಜನೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.