ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸುಬ್ರಮಣ್ಯದ ಕೆಎಸ್ಎಸ್ ಮಹಾವಿದ್ಯಾಲಯ ಆಯೋಜಿಸಿದ ’ಪ್ರೇರಣಾ 2025 ಕಾಮರ್ಸ್ ಫೆಸ್ಟ್’ನಲ್ಲಿ ಸ್ಪರ್ಧಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಟ್ರೆಷರ್ ಹಂಟ್ನಲ್ಲಿ ದ್ವಿತೀಯ ಪಿಯುಸಿಯ ಅನ್ಸಿಕಾ ಎನ್. ಶೆಟ್ಟಿ ಹಾಗೂ ಜಿ ಸುನಿಧಿ ಪ್ರಭು ಪ್ರಥಮ ಸ್ಥಾನ ಗಳಿಸಿದರೆ, ಫೈನಾನ್ಸ್ ಯೂನಿ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿಯ ಕೆ. ಪ್ರತೀಕ್ ಪಡಿಯಾರ್ ಹಾಗೂ ದಿಗಂತ್ ಎನ್.ಶೆಟ್ಟಿ ಪ್ರಥಮ, ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿಯ ಜೀವಿಕಾ ಜಿ.ಎಚ್. ಹಾಗೂ ಅನಘಾ ವಿ.ಪಿ. ದ್ವಿತೀಯ ಮತ್ತು ಫೇಸ್ ಪೈಂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿಯ ವಿಘ್ನೇಶ್ ಸಿ ರೈ ಹಾಗೂ ಯಶಸ್ ಎಸ್.ಎನ್. ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ಮಾದರಿ ಸ್ಪರ್ಧೆ: ಅಂಬಿಕಾ ಸಿ.ಬಿ.ಎಸ್. ಇ ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿ ಸಂಹಿತ್ ಜೋಸ್ಸಿ ಲೋಬೊ ಅವರು ವಿವೇಕಾನಂದ ಕೇಂದ್ರೀಯ ಶಾಲೆಯಲ್ಲಿ ನಡೆದ ಇನ್ಸೆಫ್ ರೀಜನಲ್ ಫೇರ್ನ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ, ಹರ್ಬಲ್ ಶಾಂಪು ತಯಾರಿಕೆ ವಿಷಯವನ್ನು ಪ್ರಸ್ತುತ ಪಡಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ನೆಕ್ಕಿಲಾಡಿ ಆದರ್ಶ ನಗರದ ನಿವಾಸಿಗಳಾದ ಸುಪ್ರೀತ್ ಜೆ ಲೋಬೊ ಮತ್ತು ಶೈನಿ ಪಾಯಸ್ ದಂಪತಿಯ ಪುತ್ರ.