ಪುತ್ತೂರು: ಬಪ್ಪಳಿಗೆ ಕರ್ಕುಂಜ ನಿವಾಸಿ ದಿ.ದೇವಣ್ಣ ನಾಯಕ್ ಪಿ. ಇವರ ಪತ್ನಿ ನಿವೃತ್ತ ಶಿಕ್ಷಕಿ ಎಂ.ವಿ.ಕಮಲಾಕ್ಷಿ (75 ವ.)ರವರು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.14 ರಂದು ನಿಧನರಾದರು.
ಇವರು ಸ.ಕಿ.ಪ್ರಾ.ಶಾಲೆ ಬೆದ್ರಾಳ ಹಾಗೂ ಸ.ಹಿ.ಪ್ರಾ. ಶಾಲೆ ರಾಗಿಕುಮೇರಿ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪುತ್ರಿಯರಾದ ಮಮತಾಶ್ರೀ ಪಿ.ಡಿ.,ಸೌಮ್ಯಶ್ರೀ ಪಿ.ಡಿ., ರೇಷ್ಮಶ್ರೀ ಪಿ.ಡಿ.ಅಳಿಯಂದಿರಾದ ಸೀತಾರಾಮ್ ನಾಯಕ್ ಕಾರ್ಕಳ, ಸಂತೋಷ್ ಕುಮಾರ್ ಬನ್ನೂರು, ಕಿರಣ್ ಕುಮಾರ್ ಬಪ್ಪಳಿಗೆ ಹಾಗೂ ಮೊಮ್ಮಕ್ಕಳಾದ ಸಾನ್ವಿ, ಸಮೃದ್ದ್, ಸಮನ್ವಿ, ಸಾಯಿದೀಪ್, ಸಾಯಿನಂದನ್ ರನ್ನು ಅಗಲಿದ್ದಾರೆ.
