ಕುರಿಯ ವಿದ್ಯುತ್ ಅವಘಡದಿಂದ 900 ಅಡಿಕೆ ಸಸಿ ನಾಶ- ಕೃಷಿ ಜಾತ್ರೆಗೆ ಆಗಮಿಸಿದ ಸಚಿವರಿಗೆ ಮನವಿ

0

ಪುತ್ತೂರು: ಕುರಿಯ ಗ್ರಾಮದ ಬೂಡಿಯಾರ್ ಗಣೇಶ್ ರೈ ಯವರ 3 ಎಕ್ರೆ ವಿಸ್ತೀರ್ಣದಲ್ಲಿ ಇದ್ದ 900 ಅಡಿಕೆ ಸಸಿ ವಿದ್ಯುತ್ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿದ್ದು, ಈ ಬಗ್ಗೆ ಮನವಿಯನ್ನು ಜ. 10ರಂದು ಪುತ್ತೂರು ಕೃಷಿ ಮೇಳಕ್ಕೆ ಆಗಮಿಸಿದ ಕೃಷಿ ಸಚಿವ ಚೆಲುವರಾಯ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರ ಸಮ್ಮುಖದಲ್ಲಿ ನೀಡಿ, ಘಟನೆಯ ಬಗ್ಗೆ ಸಚಿವರಿಗೆ ವಿವರಿಸಿದರು. ಸಚಿವರು ಈ ಬಗ್ಗೆ ಮುಖಮಂತ್ರಿಗಳ ಗಮನಕ್ಕೆ ತಂದು, ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿರವರ ಸೂಚನೆಯಂತೆ ಸಚಿವರಿಗೆ ಮನವಿಯನ್ನು ನೀಡಲಾಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಉದ್ಯಮಿ ಶಿವರಾಮ ಆಳ್ವ ಗಣೇಶ್ ರೈ ಬೂಡಿಯಾರ್ ಮತ್ತು ಸುಧಾಮಣಿ ಜಿ.ರೈರವರು ಮನವಿ ನೀಡುವ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here