







ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ 2026 ಜನವರಿ 31ರಂದು ನಡೆದ ಸಮಾರಂಭದಲ್ಲಿ ಡಾ. ಹರಿಣಾಕ್ಷಿ ಎಂ.ಡಿ ಕೇವಳ ಇವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದರು.


ಡಾ. ಹರಿಣಾಕ್ಷಿ ಅವರು ಉಡುಪಿಯ ಕಲ್ಯಾಣಪುರದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಂ.ಫಿಲ್. ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಡೆದಿದ್ದರು. ಪುತ್ತೂರು ಬನ್ನೂರು ನಿವಾಸಿಯಾಗಿರುವ ಇವರು ಸೀತಾರಾಮ ಕೇವಳ ಅವರ ಪತ್ನಿ.













