







ಪುತ್ತೂರು: ಗೇಮ್ಸ್ ಆನಿಮೇಷನ್, ವಿಎಫ್‌ಎಕ್ಸ್ & ಎಕ್ಸ್ಟೆಂಡೆಡ್ ಟೆಕ್ನಲಾಜಿಸ್(ಜಿಎಎಫ್‌ಎಕ್ಸ್)ನಿಂದ ಬೆಂಗಳೂರಿನ ಲಲಿತಾ ಅಶೋಕ್ ಹೊಟೇಲ್‌ನಲ್ಲಿ ನಡೆದ 2026ರ ರಾಷ್ಟ್ರಮಟ್ಟದ ವಿದ್ಯಾರ್ಥಿ ವಿಭಾಗದ ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ಪುತ್ತೂರಿನ ಬೀರಮಲೆ ನಿವಾಸಿ ಮನೋಜ್ಞ ಟಿ. ಆಚಾರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.


ಗೇಮ್ಸ್ ಆನಿಮೇಷನ್, ವಿಎಫ್‌ಎಕ್ಸ್ & ಎಕ್ಸ್ಟೆಂಡೆಡ್ ಟೆಕ್ನಲಾಜಿಸ್(ಜಿಎಎಫ್‌ಎಕ್ಸ್) ಭಾರತದಲ್ಲಿನ ಪ್ರಮುಖ ಸೃಜನಾತ್ಮಕ ಕ್ಷೇತ್ರದ ಕಾರ್ಯಕ್ರಮವಾಗಿದ್ದು, ಪಾರಂಪರಿಕ ಹಾಗೂ ಡಿಜಿಟಲ್ ಕಲಾ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿದೆ.



ಬೆಂಗಳೂರು ಚಿತ್ರಕಲಾ ಪರಿಷತ್‌ನಲ್ಲಿ ಬಿವಿಎ (ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್) ವ್ಯಾಸಂಗ ಮಾಡುತ್ತಿರುವ ಮನೋಜ್ಞ ಟಿ. ಆಚಾರ್ಯ ಪುತ್ತೂರು ಬೀರಮಲೆ ನಿವಾಸಿ, ಪರ್ಲಡ್ಕ ಶಿವಪೇಟೆಯಲ್ಲಿರುವ ಏಕದಂತ ಆಟ್ಸ್‌ನ ತಾರಾನಾಥ ಆಚಾರ್ಯ ಹಾಗೂ ರಜನಿ ಆಚಾರ್ಯ ದಂಪತಿ ಪುತ್ರ. ಪುತ್ತೂರಿನ ವಿವೇಕಾನಂದ ವಿದ್ಯಾ ಸಂಸ್ಥೆಗಳ ಹಳೆ ವಿದ್ಯಾರ್ಥಿಯಾಗಿದ್ದಾರೆ.










