ಕಡಬದಲ್ಲಿ ಪ್ರಾರಂಭಗೊಂಡಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಶಿಬಿರಾರ್ಥಿಗಳಿಂದ ಅತ್ಯುತ್ತಮ ಬೆಂಬಲ

0

ಪುತ್ತೂರು: ಪಟ್ಟಣ ಪಂಚಾಯತ್ ಕಡಬ ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಪ್ರಾರಂಭಗೊಂಡಿರುವ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರಕ್ಕೆ ಕಡಬ ಪಟ್ಟಣದ ಜನತೆಯಿಂದ ಹಿಂದೆಂದೂ ಸಿಕ್ಕಿರದಂತಹ ಸಹಕಾರ ,ಬೆಂಬಲ ದೊರೆತಿದೆ. ಈ ಉಚಿತ ಫೂಟ್ ಪಲ್ಸ್ ಥೆರಫಿಯ ಪ್ರಯೋಜನ ಪಡೆದಿರುವಂತಹ ಶಿಬಿರಾರ್ಥಿಗಳು ಹಲವಾರು ಸಮಸ್ಯೆಗಳಿಂದ ಮುಕ್ತರಾಗಿರೋ ಕಾರಣ , ಶಿಬಿರವನ್ನು ಮತ್ತೆ ಕೆಲ ದಿನಗಳ ವರೆಗೆ ವಿಸ್ತರಿಸುವಂತೆ ಶಿಬಿರ ಆಯೋಜಕರಲ್ಲಿ ಮನವಿ ಮಾಡಿದ್ದು , ಮಾ.9 ರಂದು ಕೊನೆಗೊಳ್ಳಬೇಕಿದ್ದ ಶಿಬಿರವು ಮಾ.14 ರ ತನಕ ಮತ್ತೆ ವಿಸ್ತಾರಗೊಂಡಿದೆ.


ಈ ಶಿಬಿರದ ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ ಇವರು ನೆರವೇರಿಸಿದ್ದರು.ನೆಮ್ಮದಿ ವೆಲ್ ನೆಸ್ ಸೆಂಟರ್‌ ಮುಖ್ಯಸ್ಥರಾದ ಕೆ.ಪ್ರಭಾಕರ ಸಾಲ್ಯಾನ್ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಮಾಹಿತಿ ನೀಡಿದ್ದರು.


ಮುಖ್ಯ ಅತಿಥಿಗಳಾಗಿ ಕಡಬ ಪಟ್ಟಣ ಪಂಚಾಯತ್‌ ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಕೆ. ಎಂ ಹನೀಫ್, ತಹಶೀಲ್ದಾರ್ ಪ್ರಭಾಕ‌ರ್ ಖಜೂರೆ ಹಾಗೂ ಮಖ್ಯಾಧಿಕಾರಿ ಲೀಲಾವತಿ ಮತ್ತು ಪಂಚಾಯತ್‌ ಸದಸ್ಯರು ಭಾಗವಹಿಸಿ , ಬೆಂಬಲ ನೀಡಿದ್ದರು. ಕಂಪಾನಿಯೋ ಇದರ ಮುಖ್ಯ ಪ್ರವರ್ತಕರಾದ ಸೀತಾರಾಮ ಶೆಟ್ಟಿ ಕೂಡ ಶಿಬಿರಕ್ಕೆ ಆಗಮಿಸಿ ಮಾಹಿತಿ ಹಂಚಿಕೊಂಡಿದ್ದರು. ಮಧುಮೇಹ, ರಕ್ತದೊತ್ತಡ, ಸಂಧಿವಾತ, ವೆರಿಕೊಸ್ ವೇನ್, ಸ್ನಾಯು ಸೆಳೆತ, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ಪಾರ್ಕಿನ್ ಸನ್, ನಿದ್ರೆ, ಪಾರ್ಶವಾಯು, ಬೆನ್ನು, ಗಂಟು, ಕಾಲು, ಕೈ ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳಿಗೂ ಪರಿಣಾಮಕಾರಿ ಚಿಕಿತ್ಸೆಯನ್ನು ಶಿಬಿರಗಳ ಮೂಲಕ ಆಯೋಜನೆ ಮಾಡಿ, ಬರೀ ಥೆರಪಿ ಮೂಲಕ ಚಿಕಿತ್ಸೆ ಒದಗಿಸಿ, ಲಕ್ಷಕ್ಕೂ ಮಿಕ್ಕಿ ಶಿಬಿರಾರ್ಥಿಗಳೂ ಈ ಅದ್ಭುತ ಥೆರಪಿಯ ಪ್ರಯೋಜನವನ್ನು ಪಡೆದು, ಹಲವು ಬಗೆಯ ಸಂಕಟ, ಸಮಸ್ಯೆಗಳಿಂದ ವಿಮುಖರಾಗಿರುವ ಹಲವು ನಿದರ್ಶನಗಳಿವೆ.

12 ದಿನಗಳಲ್ಲಿ 800 ಮಂದಿಗೆ ಥೆರಫಿ – ಶಿಬಿರ 5 ದಿನ ಮತ್ತೆ ವಿಸ್ತರಣೆ…
118 ಕಡೆ ಉಚಿತ ಶಿಬಿರವನ್ನು ಆಯೋಜಿಸಿರುವ ಸಂಸ್ಥೆಯ ಇತಿಹಾಸದಲ್ಲಿ ಕಡಬ ಪಟ್ಟಣದಲ್ಲಿ ಪ್ರಾರಂಭಿಸಿರೋ ಶಿಬಿರವು 117ನೇಯ ಶಿಬಿರವಾಗಿದೆ. ಇಲ್ಲಿ ಆರಂಭದ ದಿನದಿಂದಲೇ ಅಧಿಕ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಆಗಮಿಸಿ ಥೆರಪಿ ಲಾಭ ಪಡೆದುಕೊಂಡಿದ್ದಾರೆ. ಕೇವಲ 12 ದಿನಗಳಲ್ಲಿ 800 ಮಂದಿ ಥೆರಫಿ ಪಡೆಯೋ ಮೂಲಕ ದಾಖಲೆ ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here