







ಬಾಕಿಲ: ಜೇಸಿಐ ಆಲಂಕಾರಿನ ಪೂರ್ವಾಧ್ಯಕ್ಷ ಹಾಗೂ ಜೇಸಿಐ ಭಾರತದ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷ ದಿ. ಪ್ರದೀಪ್ ಬಾಕಿಲರ ಸ್ಮರಣಾರ್ಥ ಹಮ್ಮಿಕೊಂಡಿರುವ ದೀಪೋತ್ಥಾನ ಸರಣಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಬಾಕಿಲ ಹೊಂಬೆಳಕು ಮನೆಯಲ್ಲಿ ನಡೆಯಿತು.


ಜೇಸಿಐ ಭಾರತದ ವಲಯ 15ರ ಆಡಳಿತ ವಿಭಾಗದ ನಿರ್ದೇಶಕ ಹಾಗೂ ವಲಯ ತರಬೇತುದಾರಾಗಿರುವ ಜೇಸಿಐ ಸೆನೆಟರ್ ಸುಹಾಸ್ ಮರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಲಯಾಧಿಕಾರಿಯಾಗಿ ಪ್ರದೀಪ್ ಬಾಕಿಲರು ವಲಯದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಓರ್ವ ವಲಯ ತರಬೇತುದಾರನಾಗಿ ನೂರಾರು ತರಬೇತಿಗಳನ್ನು ವಲಯಾದ್ಯಂತ ನಡೆಸಿಕೊಟ್ಟು,ತಾನು ಬೆಳೆಯುವುದರ ಜೊತೆಗೆ ಹಲವಾರು ತರಬೇತುದಾರರನ್ನು ಈ ಸಮಾಜಕ್ಕೆ ಕೊಟ್ಟಿರುವ ಪ್ರದೀಪರ ಸ್ಮರಣಾರ್ಥ ಈ ಸರಣಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಲಂಕಾರು ಜೇಸಿಐ ನ ಅಧ್ಯಕ್ಷ ಮಹೇಶ್ ಪಾಟಾಳಿ ಮಾತನಾಡುತ್ತಾ ಪ್ರದೀಪ್ ಬಾಕಿಲರು ನಮ್ಮಘಟಕದ ಆಸ್ತಿಯಾಗಿದ್ದವರು,ಅವರ ಅಗಲುವಿಕೆ ಘಟಕಕ್ಕೆ ತುಂಬಲಾರದ ನಷ್ಟ.ಅವರ ಹೆಸರನ್ನು ಜೀವಂತವಾಗಿರಿಸುವ ಸದುದ್ದೇಶದಿಂದ ಅವರ ಅಚ್ಚುಮೆಚ್ಚಿನ ಕ್ಷೇತ್ರವಾದ ತರಬೇತಿ ವಿಭಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಭಾರತದ ವಲಯ 15ರ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಹಾಗೂ ಆಲಂಕಾರು ಜೇಸಿಐ ನ ಸ್ಥಾಪಕಾಧ್ಯಕ್ಷ ಜನಾರ್ಧನ್ ಬಿ.ಎಲ್ ಮಾತನಾಡುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.




ಘಟಕದ ಸದಸ್ಯರಿಗೆ ತರಬೇತಿ
ದೀಪೋತ್ಥಾನ ಸರಣಿ ತರಬೇತಿ ಕಾರ್ಯಕ್ರಮದ ಮೊದಲ ತರಬೇತಿ ಕಾರ್ಯಕ್ರಮವನ್ನು ಘಟಕದ ಸದಸ್ಯರಿಗೆ ಟೀಮ್ ಬ್ಯುಲ್ಡಿಂಗ್ ಎಂಬ ವಿಷಯದ ಬಗ್ಗೆ ನೀಡಲಾಯಿತು.ವಲಯ ತರಬೇತುದಾರ ಸುಹಾಸ್ ಮರಿಕೆ ತರಬೇತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ದಿವಂಗತ ಪ್ರದೀಪ್ ಬಾಕಿಲರ ಪತ್ನಿ ಹೇಮಲತಾ ಪ್ರದೀಪ್,ಘಟಕದ ನಿಕಟಪೂರ್ವಾಧ್ಯಕ್ಷ ಗುರುರಾಜ್ ರೈ,ಕಾರ್ಯಕ್ರಮ ನಿರ್ದೇಶಕ ಗಣೇಶ್ ಕಟ್ಟಪುಣಿ,ಮಹಿಳಾ ಜೇಸಿ ಅಧ್ಯಕ್ಷೆ ಕೃತಿಕಾ ಟಿ.ರೈ,ಜೂನಿಯರ್ ಜೇಸಿ ಅಧ್ಯಕ್ಷೆ ಜೆಜೇಸಿ ಕೀರ್ತಿ ಶೆಟ್ಟಿ,ಜೇಸಿಐ ಆಲಂಕಾರಿನ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಚೇತನ್ ಮೊಗ್ರಾಲ್ ಅತಿಥಿಗಳ ಪರಿಚಯ ಮಾಡಿದರು.ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ,ಕಾರ್ಯದರ್ಶಿ ಜನಾರ್ಧನ್ ಸುರ್ಯ ವಂದಿಸಿದರು.ಭಾರತಿ ಅತುಲ್ ಭಟ್ ಸಹಕರಿಸಿದರು.










