ಉಪ್ಪಿನಂಗಡಿ: ಉಬಾರ್ ಕಂಬಳೋತ್ಸವಕ್ಕೆ ತಾರಾ ಮೆರುಗು

0

ಉಪ್ಪಿನಂಗಡಿ: ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಸಮಿತಿಯ ಅಧ್ಯಕ್ಷ, ಶಾಸಕರಾದ ಅಶೋಕ್ ಕುಮಾರ್ ರೈಯವರ ಸಾರಥ್ಯದಲ್ಲಿ 40ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಮಾ.28ರಂದು ಬೆಳಗ್ಗೆ ಚಾಲನೆ ದೊರೆಯಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಗಣ್ಯಾತಿಗಣ್ಯರು ಹಾಗೂ ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ನಟ- ನಟಿಯರು ಆಗಮಿಸಲಿದ್ದಾರೆ.


ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಶೇಕ್ ಇಟ್ ಪುಷ್ಪಾವತಿ ಖ್ಯಾತಿಯ ನಟಿ ನಿಮಿಕಾ ರತ್ನಾಕರ್, ಕನ್ನಡ ಮತ್ತು ತೆಲುಗು ಚಿತ್ರನಟ ವಷಿಷ್ಠ ಸಿಂಹ, ಬಿರ್ದ್‌ದ ಕಂಬಳದ ಚಿತ್ರನಟ ಸ್ವರಾಜ್ ಶೆಟ್ಟಿ, ಸು… ಫ್ರಮ್ ಸೋ… ನಟ ಸನಿಲ್ ಗುರು, ಚಲನ ಚಿತ್ರ ನಟ ಅರವಿಂದ್ ಬೋಳಾರ್, ಸು… ಫ್ರಮ್ ಸೋ… ನಟ ಪುಷ್ಪರಾಜ್ ಬೊಳ್ಳಾರ್ ಹಾಗೂ ದಸ್ಕತ್ ಚಿತ್ರನಟಿ ಭವ್ಯ ಪೂಜಾರಿ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here