ಕೈಕಾರ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ

0

ಮಕ್ಕಳು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕು: ನಾ.ಕುಕ್ಕುವಳ್ಳಿ


ಪುತ್ತೂರು: ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಇತ್ತೀಚೆಗೆ ನಡೆಯಿತು. ಮಕ್ಕಳ ಸಾಹಿತಿ, ನಿವೃತ್ತ ಮುಖ್ಯಗುರು ನಾರಾಯಣ ರೈ ಕುಕ್ಕುವಳ್ಳಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಒಂದು ಶಿಬಿರದ ಯಶಸ್ವಿ ಎಲ್ಲರ ಸಹಕಾರದೊಂದಿಗೆ ಮಕ್ಕಳು ಪಾಲ್ಗೊಂಡು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಶಿಬಿರವು ಸಂಪೂರ್ಣ ಉಚಿತ ವಾಗಿರುತ್ತದೆ. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಇಲ್ಲಿಗೆ ಬಂದು ತರಬೇತಿ ನೀಡಿದ್ದಾರೆ. ಶಿಕ್ಷಕರಾದ ರಮೇಶ್ ಉಳಯ, ಚಂದ್ರ ಮೌಳಿ ಶಾರದಾ ವಿದ್ಯಾಲಯ ತಲಪಾಡಿ, ಶಿವ ಸುಬ್ರಹ್ಮಣ್ಯ ಕಲಾ ಆರ್ಟ್ಸ್ ಕೈಕಾರ, ಪುತ್ತೂರು. ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ರಾಮಣ್ಣ ರೈ ಕೈಕಾರ, ಅತಿಥಿ ಶಿಕ್ಷಕ ಸುರರಾಜ್ ಮೂಡಬಿದ್ದಿರಿ, ಯಶೋಧ ರಾಜ್ಯಮಟ್ಟದ ತರಬೇತುದಾರರು ಪೇರಲ್ ತಡ್ಕ ಶಾಲೆ ಇವರೆಲ್ಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಮಕ್ಕಳು ಸಾಹಿತ್ಯ, ನೃತ್ಯ, ಚಿತ್ರಕಲೆ, ಆಶುಭಾಷಣ, ಸಾಹಿತ್ಯ, ಎಲ್ಲದರಲ್ಲೂ ಬೆಳಗಬೇಕು. ಹಿರಿಯರ ಮಾರ್ಗದರ್ಶನ ಬಾಲ್ಯದಲ್ಲಿ ಮಕ್ಕಳಿಗೆ ತುಂಬಾ ಅಗತ್ಯ ಎಂದು ಹೇಳಿದರು. ನೀಲಾ ಮತ್ತು ಮೋತಿಯ ಕಥೆಯನ್ನು ಮನೋಜ್ನವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಸಂಚಾಲಕ ಸೀತಾರಾಮ ರೈ, ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ, ಎಸ್ ಡಿ ಎಂ ಸಿ ಅಧ್ಯಕ್ಷೆ ಶೀಲಾವತಿ ಉಪಸ್ಥಿತರಿದ್ದರು. ನಂದಿನಿ ಕಾರ್ಯಕ್ರಮ ನಿರೂಪಿಸಿದರು,ಶೋಭಾ ಶೆಟ್ಟಿ ವಂದಿಸಿದರು, ಶಾಲಾ ಮುಖ್ಯ ಗುರು ರಾಮಣ್ಣರೈ ಸ್ವಾಗತಿಸಿದರು, ಶಾಲಾ ಅತಿಥಿ ಶಿಕ್ಷಕ ಸುರರಾಜ್ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ತರಬೇತಿ ನೀಡಿದರು.

LEAVE A REPLY

Please enter your comment!
Please enter your name here