







ಕಾಂಗ್ರೆಸ್, ಕಮ್ಯುನಿಸ್ಟ್‌ಗೆ ಉತ್ತರ ಕೊಡುವ ಕೆಲಸವಾಗಿದೆ- ಸಂಜೀವ ಮಠಂದೂರು


ಪುತ್ತೂರು: ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಒಳ್ಳೆಯ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳ ಗೂಂಡಾರಾಜ್ಯಕ್ಕೆ, ಅಲ್ಲಿನ ಮತದಾರರು ಬಿಜೆಪಿಯನ್ನು ಗೆಲ್ಲಿಸುವ, ಹಿಂದುತ್ವದ ನೆಲೆಯಲ್ಲಿ ಅಭಿವೃದ್ದಿ ಮಾಡುವ ಸಂದೇಶ ನೀಡಿದ್ದಾರೆ. ಹೀಗೆ ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ತಕ್ಕ ಉತ್ತರ ಕೊಡುವ ಕೆಲಸ ಆಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.



ಪಂಚರಾಜ್ಯದ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ಪುತ್ತೂರು ಬಿಜೆಪಿಯಿಂದ ಮೇ.4ರಂದು ಸಂಜೆ ಬಿಜೆಪಿ ಕಚೇರಿ ಮುಂದೆ ನಡೆದ ಹರ್ಷಾಚರಣೆಯಲ್ಲಿ ಅವರು ಮಾತನಾಡಿದರು. ಪಂಚರಾಜ್ಯ ಚುನಾವಣೆ ಬಿಜೆಪಿಯ ಶಕ್ತಿ ದೇಶದಲ್ಲೇ ಸಂಚಲನ ಮೂಡಿಸುವ ಕೆಲಸ ಆಗಿದೆ. ಅಸ್ಸಾಂ, ಪಶ್ಚಿಮಬಂಗಾಳ, ಪುದುಚೇರಿಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕೇರಳದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ತಮಿಳುನಾಡಿನಲ್ಲಿ ಹೊಂದಾಣಿಕೆಯ ಜಯಸಾಽಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅವನತಿಗೆ ಅಲ್ಲಿನ ಜನರು ಸರಿಯಾದ ಉತ್ತರ ನೀಡಿದ್ದಾರೆ. ಪ್ರಧಾನಿಯನ್ನು ತುಚ್ಯವಾಗಿ ಕಂಡರೆ ಜನ ಯಾವ ರೀತಿ ಉತ್ತರ ಕೊಡುತ್ತಾರೆ ಎಂಬುದು ಪಶ್ಚಿಮ ಬಂಗಾಳ ಉದಾಹರಣೆಯಾಗಿದೆ ಎಂದರು. ಪುತ್ತೂರಿನಿಂದ ಬಿಜೆಪಿಯ ಒಂದಷ್ಟು ನಾಯಕರು ಕೇರಳಕ್ಕೆ ಹೋಗಿ ಪ್ರಚಾರ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ದೇಶದಲ್ಲಿ ಆದಂತಹ ಈ ಚುನಾವಣೆಯ ಒಟ್ಟು ಫಲಿತಾಂಶ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ಬಿಜೆಪಿಯಿಂದ ಅಭಿವೃದ್ದಿ ಪರ ಚಿಂತನೆ, ದೇಶದ ಸಂಸ್ಕೃತಿಗೆ ಪೂರಕವಾಗಿರುವ ಹಿಂದುತ್ವದ ಆಡಳಿತಕ್ಕೆ ಜನ ಕೊಟ್ಟ ತೀರ್ಮಾನವಾಗಿದೆ. ಮೂರು ರಾಜ್ಯದಲ್ಲಿ ಬಹುಮತ ಪಡೆದು ಬಾಕಿ ರಾಜ್ಯದಲ್ಲೂ ಬಿಜೆಪಿ ತನ್ನ ಅಸ್ತಿತ್ವವನ್ನು ಬೆಳೆಸುವ ಕೆಲಸ ಮಾಡಿದೆ. ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ಮೂರು ಸೀಟು ಗೆಲ್ಲುವ ಕೆಲಸ ಆಗಿದೆ. ಅದರ ಜೊತೆಯಲ್ಲಿ ತಮಿಳುನಾಡಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದೆ. ಒಟ್ಟು ದೇಶದಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿಗೆ ಉತ್ತರ ಕೊಡುವ ಕೆಲಸ ಆಗಿದೆ ಎಂದರು.
ಹಿಂದುತ್ವದ ಪಥದಲ್ಲಿ ಅಭಿವೃದ್ಧಿಯ ಮಂತ್ರಕ್ಕೆ ಜಯ: ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ ಪಂಚರಾಜ್ಯ ಚುನಾವಣೆಯಲ್ಲಿ ಹಿಂದುತ್ವದ ಪಥದಲ್ಲಿ ಅಭಿವೃದ್ಧಿಯ ಮಂತ್ರ ಪ್ರಧಾನಿ ಮೋದಿ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಗೆಲುವು ಶ್ಯಾಮಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ದೊರೆತ ದಿವಸವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಭವಿಷ್ಯದಲ್ಲಿ ಭಾರತ ಶಕ್ತಿಯುತವಾಗಲಿದೆ ಎಂದರು.
ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಂದಾಗಿ
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಬಳಿಕ ಮಾತನಾಡಿದ ಯುವ ಉದ್ಯಮಿ ಉಜ್ವಲ್ ಪ್ರಭು ಅವರು ಪಂಚರಾಜ್ಯ ಚುನಾವಣೆಯಲ್ಲಿ ಬಂದಿರುವ ಫಲಿತಾಂಶ ಸಂತೋಷ ತಂದಿದೆ. ನಾವು ಬಿಜೆಪಿ ಕಾರ್ಯಕರ್ತರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇವೆ. 15 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಮೋದಿಯವರು ಮಾಡಿದ ಶಪಥ ಇವತ್ತು ಫಲಿಸಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಎಲ್ಲಾ ಧರ್ಮವನ್ನು ಪ್ರೀತಿಸುವ ಭಾರತ ದೇಶದಲ್ಲಿ ನಾವು ಹುಟ್ಟಿರುವುದು ನಮಗೆ ಅತ್ಯಂತ ಹೆಮ್ಮೆ ಇದೆ. ಎಲ್ಲರನ್ನು ಸಮಾನರಾಗಿ ಕಾಣುವ ದೇಶ ಭಾರತ. ಇಂತಹ ಸಂದರ್ಭದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ನಾವು ಪಡೆದಿರುವುದು ಭಾಗ್ಯ. ಹಾಗಾಗಿ ಭಿನ್ನಾಭಿಪ್ರಾಯ ಮರೆತು ನಾವೆಲ್ಲ ಒಂದೆ ಭಾವನೆಯಿಂದ ಮತ್ತೊಮ್ಮೆ ೨೦೨೮ರ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ. ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಜಿಲ್ಲಾ -ಲಾನುಭವಿಗಳ ಪ್ರಮುಖ್ ನಿತೀಶ್ ಕುಮಾರ್ ಶಾಂತಿವನ, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಹರಿಪ್ರಸಾದ್ ಯಾದವ್, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಹಿರಿಯರಾದ ಎಸ್. ಅಪ್ಪಯ್ಯ ಮಣಿಯಾಣಿ, ಉದ್ಯಮಿ ಉಜ್ವಲ್ ಪ್ರಭು, ಸ್ವರ್ಣಲತಾ ಹೆಗ್ಡೆ, ಶಶಿಕಲಾ ಸಿ.ಎಸ್, ಜಯಲಕ್ಷ್ಮೀ ಶಗ್ರಿತ್ತಾಯ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ಭಾಸ್ಕರ್ ರೈ ಕಟ್ಟಪುಣಿ, ಭಾಮಿ ಜಗದೀಶ್ ಶೆಣೈ, ಅಚ್ಚುತ ನಾಯಕ್, ವಿರೂಪಕ್ಷಾ ಭಟ್, ರಫೀಕ್ ದರ್ಬೆ, ಹರೀಶ್ ದೋಳ್ಪಾಡಿ, ನಿತೇಶ್ ಕಲ್ಲೇಗ, ಯತೀಶ್ ದೇವ, ಸುರೇಶ್ಚಂದ್ರ ರೈ, ರಾಜೇಶ್ ಬನ್ನೂರು, ಅಭಿಜಿತ್ ಕೊಡಿಪ್ಪಾಡಿ, ಸುನಿಲ್ ದಡ್ಡು, ರಾಜೇಶ್ ರೈ ಪರ್ಪುಂಜ, ವಸಂತಲಕ್ಷ್ಮೀ, ಅಣ್ಣಪ್ಪ ಕಾರೆಕ್ಕಾಡು, ನಾಗೇಶ್ ಟಿ.ಎಸ್, ಅಜಿತ್ ಕುಮಾರ್ ರೈ, ದಿನೇಶ್ ಪಂಜಿಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮಂಡಲದ ಪ್ರದಾನ ಕಾರ್ಯದರ್ಶಿ ಲೊಕೇಶ್ ಚಾಕೋಟೆ ಕಾರ್ಯಕ್ರಮ ನಿರೂಪಿಸಿದರು.
ಓಟ್ ಚೋರಿ ಏನಾಯಿತು!
ಕೇರಳದಲ್ಲಿ ಯುಡಿಎ- ಬಂದಿದೆ. ದಾವಣಗೆರೆಯಲ್ಲೂ ಕಾಂಗ್ರೆಸ್ ಗೆಲುವಾಗಿದೆ. ಓಟ್ ಚೋರಿ ಎನ್ನುವವರು ಮರು ಮತದಾನಕ್ಕೆ ಹೋಗಬಹುದಿತ್ತಲ್ಲ. ಸುಮ್ಮನೆ ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಿ, ಚುನಾವಣಾ ಆಯೋಗದ ಕುರಿತು ಅಪಪ್ರಚಾರ ಮಾಡುವ ಕೆಲಸವನ್ನೂ ನಿಲ್ಲಿಸಿ, ಇನ್ನಾದರೂ ಕಾಂಗ್ರೆಸ್ ಅಪಪ್ರಚಾರ ಮಾಡುವುದು ಬಿಡಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಚರುಂಬುರಿ, ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ
ಪಂಚರಾಜ್ಯ ಚುನಾವಣೆಯ -ಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ರತ್ನಾಕರ ಪ್ರಭು ಅವರು ಸ್ಥಳದಲ್ಲೇ ಚುರಂಬುರಿ ಮಾಡಿ ಕಾರ್ಯಕರ್ತರಿಗೆ ಹಂಚಿದರು. ಈ ಸಂದರ್ಭ ಸಿಹಿ ತಿಂಡಿ ಹಂಚಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬಸ್ ನಿಲ್ದಾಣದ ಬಳಿಯೂ ಪಟಾಕಿ ಸಿಡಿಸಲಾಯಿತು.










