ಸುಂದರ ರೈ ಮಂದಾರ ಅವರಿಗೆ ಬೆದರಿಕೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಸತೀಶ್ ರೈ ದುಬೈ ಸ್ಪಷ್ಟನೆ

0

ಪುತ್ತೂರು: ಸುಳ್ಳು ಸಾಕ್ಷಿ ಹೇಳುವಂತೆ ಕಲಾವಿದ ಸುಂದರ ರೈ ಮಂದಾರ ಅವರಿಗೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪಡುಮಲೆ‌ ಮೂಲದ ಸತೀಶ್ ರೈ ದುಬೈ ಅವರು ಸ್ಪಷ್ಟನೆ ನೀಡಿದ್ದಾರೆ.


ಕತಾರ್ನಿಂದ ದೂರವಾಣಿ ಮೂಲಕ ಸುದ್ದಿ ಜೊತೆ ಮಾತನಾಡಿದ ಅವರು, ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಮತ್ತು ಆ ದೂರವಾಣಿ ಸಂಖ್ಯೆಯೂ ನನ್ನದಲ್ಲ. ನಾನೂ ಪಡುಮಲೆ ಕೊಯಿಲ ಬಡಗನ್ನೂರು ಮೂಲದವನಾಗಿರುವುದರಿಂದ ಗೊಂದಲವಾಗುವಂತಾಗಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here